Saturday, October 1, 2022
spot_img
Homeಸುದ್ದಿನಾಗಪುರದಲ್ಲಿ ಗೆದ್ದ ಭಾರತ: ಸರಣಿ ಸಮಬಲ

ನಾಗಪುರದಲ್ಲಿ ಗೆದ್ದ ಭಾರತ: ಸರಣಿ ಸಮಬಲ

ಮಳೆಯ ಕಾಟದಿಂದ ತಲಾ 8 ಓವರ್‌ಗಳ ಪಂದ್ಯ

ನಾಗ್ಪುರ: ನಾಗ್ಪುರದಲ್ಲಿ ಶುಕ್ರವಾರ ಮಳೆಯ ನಡುವೆ ನಡೆದ ಭಾರತ- ಆಸ್ಟ್ರೇಲಿಯಾ ನಡುವಿನ 2ನೇ ಟಿ20 ಕದನದಲ್ಲಿ ಭಾರತ 6 ವಿಕೆಟ್ ಜಯ ಗಳಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ಆಸ್ಟ್ರೇಲಿಯಾವನ್ನು 5 ವಿಕೆಟ್ ನಷ್ಟಕ್ಕೆ 90 ರನ್‌ಗಳಿಗೆ ಕಟ್ಟಿಹಾಕಿತು. ರಾತ್ರಿ ಇಡೀ ಸುರಿದ ಮಳೆಯ ಪರಿಣಾಮ ವಿಸಿಎ ಸ್ಟೇಡಿಯಮ್‌ನಲ್ಲಿ ಒದ್ದೆಯಾದ ಔಟ್ ಫೀಲ್ಡ್‌ನಿಂದಾಗಿ ಟಾಸ್ 3 ಗಂಟೆಗಳ ಕಾಲ ವಿಳಂಬವಾದ್ದರಿಂದ ಭಾರತ-ಆಸ್ಟ್ರೇಲಿಯಾ ಪಂದ್ಯವನ್ನು ತಲಾ 8 ಓವರ್‌ಗಳಿಗೆ ಇಳಿಕೆ ಮಾಡಲಾಯಿತು.
8 ಓವರ್‌ಗಳಲ್ಲಿ ಆಸ್ಟ್ರೇಲಿಯಾ 91 ರನ್‌ಗಳ ಗುರಿಯನ್ನು ಭಾರತಕ್ಕೆ ನೀಡಿತ್ತು. ಆಸ್ಟ್ರೇಲಿಯ ಪರ ಆರನ್ ಫಿಂಚ್ 15 ಎಸೆತಗಳಲ್ಲಿ 31 ರನ್, ಮಾಥ್ಯೂ ವೇಡ್ 20 ಎಸೆತಗಳಲ್ಲಿ 43 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು.
ಭಾರತದ ಪರ ಅಕ್ಸರ್ ಪಟೇಲ್ 2 ವಿಕೆಟ್ ಗಳಿಸಿದರು, ಜಸ್‌ಪ್ರಿತ್ ಬೂಮ್ರಾ 1 ವಿಕೆಟ್ ಗಳಿಸಿದರು. ಭಾರತ 7.2 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 92 ರನ್ ಗಳಿಸಿ ಆಸ್ಟ್ರೇಲಿಯ ವಿರುದ್ಧ ಜಯಗಳಿಸಿ, ಸರಣಿಯಲ್ಲಿ ಸಮಬಲ ಸಾಧಿಸಿದೆ. ಕೆಎಲ್ ರಾಹುಲ್ 6 ಎಸೆತಗಳಲ್ಲಿ 10 ರನ್ ಗಳಿಸಿದರು. ರೋಹಿತ್ ಶರ್ಮಾ 20 ಎಸೆತಗಳಲ್ಲಿ 46 ರನ್ ಗಳಿಸಿದರೆ ವಿರಾಟ್ ಕೊಹ್ಲಿ 6 ಎಸೆತಗಳಲ್ಲಿ 11 ರನ್ ಗಳಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!