Saturday, October 1, 2022
spot_img
Homeಸುದ್ದಿಹಬ್ಬಕ್ಕೆ ಕರೆಂಟ್‌ ಶಾಕ್‌: ಯುನಿಟ್‌ ದರ ಹೆಚ್ಚಳ

ಹಬ್ಬಕ್ಕೆ ಕರೆಂಟ್‌ ಶಾಕ್‌: ಯುನಿಟ್‌ ದರ ಹೆಚ್ಚಳ

ಬೆಂಗಳೂರು: ದಸರಾ ಹಬ್ಬದ ಸಂದರ್ಭದಲ್ಲೇ ಸರಕಾರ ಜನರಿಗೆ ವಿದ್ಯುತ್‌ ಶಾಕ್‌ ನೀಡಿದೆ. ಅ.1ರಿಂದ ಅನ್ವಯವಾಗುವಂತೆ ವಿದ್ಯುತ್ ಬಿಲ್ ಏರಿಕೆಯಾಗಿದೆ. ಇಂಧನ ಹೊಂದಾಣಿಕೆ ಶುಲ್ಕ ಸರಿತೂಗಿಸುವ (ಎಫ್ಎಸಿ) ಭಾಗವಾಗಿ ವಿದ್ಯುತ್ ದರ ಹೆಚ್ಚಳವಾಗುತ್ತಿದೆ.
ಕರ್ನಾಟಕದ ವಿದ್ಯುತ್ ನಿಯಂತ್ರಣ ಆಯೋಗ ಸೆ.23 ರಂದು ಬಿಡುಗಡೆ ಮಾಡಿರುವ ಆದೇಶದಲ್ಲಿ ಅ.1 ರಿಂದ ಮಾ.31, 2023 ವರೆಗೆ ಎಫ್ಎಸಿ ಭಾಗವಾಗಿ ವಿದ್ಯುತ್ ದರ ಸರಿತೂಗಿಸಲು ಎಸ್ಕಾಮ್‌ಗಳಿಗೆ ಅವಕಾಶ ನೀಡಬೇಕೆಂದು ಹೇಳಿದೆ.
ಆದೇಶದ ಪ್ರಕಾರ, ಬೆಸ್ಕಾಮ್ ವ್ಯಾಪ್ತಿಯಲ್ಲಿ ಗ್ರಾಹಕರಿ ಪ್ರತಿ ಯುನಿಟ್‌ಗೆ 43 ಪೈಸೆ, ಮೆಸ್ಕಾಮ್‌ನಲ್ಲಿ ಪ್ರತಿ ಯುನಿಟ್‌ಗೆ 23 ಪೈಸೆ ಹೆಚ್ಚಳವನ್ನು ಗ್ರಾಹಕರು ಭರಿಸಬೇಕಾಗುತ್ತದೆ. ಸಿಎಸ್‌ಎಸ್‌ಸಿ ಯ ವ್ಯಾಪ್ತಿಗೆ ಬರುವ ಗ್ರಾಹಕರಿಗೆ ವಿದ್ಯುತ್ ದರ ಪ್ರತಿ ಯುನಿಟ್‌ಗೆ 35 ಪೈಸೆ ಹಚ್ಚಳವಾಗಲಿದ್ದರೆ, ಹೆಸ್ಕಾಮ್ ಹಾಗೂ ಗೆಸ್ಕಾಮ್ ಗ್ರಾಹರಿಗೆ ಪ್ರತಿ ಯುನಿಟ್‌ಗೆ 35 ಪೈಸೆ ಹೆಚ್ಚಳವಾಗಲಿದೆ.
ಇದಕ್ಕೂ ಮುನ್ನ ಜುಲೈ 2022 ರಿಂದ ಡಿಸೆಂಬರ್ 2022 ರ ಅವಧಿಗೆ ಪ್ರತಿ ಯುನಿಟ್ ವಿದ್ಯುತ್ ದರವನ್ನು 21 ಪೈಸೆಯಿಂದ 31 ಪೈಸೆ ವರೆಗೆ ಏರಿಕೆ ಮಾಡಲು ಅನುಮತಿ ನೀಡಲಾಗಿತ್ತು. ಏಪ್ರಿಲ್ 1ರಂದು ಕೆಇಆರ್‌ಸಿ ಸರಾಸರಿ ವಿದ್ಯುತ್ ದರವನ್ನು ಪ್ರತಿ ಯುನಿಟ್‌ಗೆ 35 ಪೈಸೆಯಷ್ಟು ಹೆಚ್ಚಳ ಮಾಡಿತ್ತು. ಕಲ್ಲಿದ್ದಲು ಹಾಗೂ ಸ್ಟಾಕ್ ಲಭ್ಯತೆಯ ಆಧಾರದಲ್ಲಿ ಬೆಲೆ ಏರಿಕೆ ಮಾಡಲಾಗುತ್ತದೆ. ಮಾರುಕಟ್ಟೆ ಸ್ಥಿರವಾದರೆ ಬೆಲೆ ಇಳಿಕೆಯಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!