Saturday, October 1, 2022
spot_img
Homeಅಂಕಣಆರೋಗ್ಯ ಧಾರಾ- ಸುದರ್ಶನ ಘನವಟಿ

ಆರೋಗ್ಯ ಧಾರಾ- ಸುದರ್ಶನ ಘನವಟಿ

ಈ ವಾರ ಜ್ವರದಲ್ಲಿ ಉಪಯೋಗಿಸುವಂತಹ ಸುದರ್ಶನ ಘನವಟಿಯ ಪ್ರಯೋಜನವನ್ನು ತಿಳಿದುಕೊಳ್ಳೋಣ.
ಸುದರ್ಶನ ಘನವಟಿಯಲ್ಲಿ ಉಪಯೋಗಿಸುವಂತಹ ಔಷಧ ದ್ರವ್ಯಗಳು – ತ್ರಿಫಲಾ, ಹರಿದ್ರಾ, ಶುಂಠಿ, ಮರಿಚ, ಮುಸ್ತಾ, ಚಿತ್ರಕ, ಲವಂಗ, ಅಶ್ವಗಂಧ
ಸುದರ್ಶನ ಘನವಟಿಯ ಉಪಯೋಗಗಳು:
• ಸುದರ್ಶನ ಘನವಟಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
• ಜ್ವರವನ್ನು ಕಡಿಮೆಗೊಳಿಸುತ್ತದೆ
• ಜೀರ್ಣಶಕ್ತಿಯನ್ನು ಪ್ರಬಲಗೊಳಿಸುತ್ತದೆ
• ಉರಿಯೂತವನ್ನು ಕಡಿಮೆಗೊಳಿಸುತ್ತದೆ
• ದೇಹ ಬೇನೆಯನ್ನು ಗುಣಪಡಿಸುತ್ತದೆ
• ವಾಕರಿಕೆ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಮಾಡುತ್ತದೆ
• ಅಸಿಡಿಟಿಯನ್ನು ಕಮ್ಮಿ ಮಾಡುತ್ತದೆ
• ಮಾಂಸಖಂಡಗಳಿಗೆ ಬಲ ನೀಡುತ್ತದೆ
• ಕರುಳಿನ ತೊಂದರೆಯನ್ನು ನಿವಾರಿಸುತ್ತದೆ
• ಯಕೃತ್ತಿನ ರಕ್ಷಣೆ ಮಾಡಿ ಯಕೃತ್ ಕ್ರಿಯೆಯನ್ನು ಸುಧಾರಿಸುತ್ತದೆ
• ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ
• ಬೆವರುವಿಕೆಯನ್ನು ಹೆಚ್ಚಿಸುತ್ತದೆ ಇದರಿಂದ ದೇಹದ ತಾಪಮಾನ ಕಡಿಮೆ ಮಾಡಲು ಸಹಾಯವಾಗುತ್ತದೆ. ಹೀಗಾಗಿ ಇದನ್ನು ಜ್ವರದ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ.
• ಇನ್‌ಫೆಕ್ಷನ್ ಕಡಿಮೆಗೊಳಿಸುತ್ತದೆ
• ನೆಗಡಿ ಹಾಗೂ ಕೆಮ್ಮನ್ನು ಗುಣಪಡಿಸುತ್ತದೆ
• ರಕ್ತವನ್ನು ಶುದ್ಧೀಕರಿಸುತ್ತದೆ
• ಮಾನಸಿಕ ಒತ್ತಡವನ್ನು ದೂರ ಮಾಡುತ್ತದೆ
ಸೇವಿಸುವ ಪ್ರಮಾಣ (ಡೋಸೇಜ್)
2 ಟ್ಯಾಬ್ಲೆಟ್ ಬಿಸಿ ನೀರಿನ ಜತೆ ಆಯುರ್ವೇದ ವೈದ್ಯರ ಸಲಹೆ ಪ್ರಕಾರ ಉಪಯೋಗಿಸಿ. ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರು ಇದನ್ನು ಎಚ್ಚರಿಕೆಯಿಂದ ಸೇವಿಸಬೇಕು.
ಡಾ. ಹರ್ಷಾ ಕಾಮತ್
ಖ್ಯಾತ ಆಯುರ್ವೇದ ತಜ್ಞರು

LEAVE A REPLY

Please enter your comment!
Please enter your name here

Most Popular

error: Content is protected !!