ಕಾರ್ಕಳ: ತೋಟದ ಲೀಸ್ ವಿಚಾರಕ್ಕೆ ಸಂಬಂಧಿಸಿ ಲೀಸ್‌ಗೆ ಪಡೆದುಕೊಂಡಿರುವ ಕೇರಳದ ಇಡುಕ್ಕಿ ಮೂಲದ ಜೋಸೆಫ್ ಜೆ. ಪಾಲಕುನ್ನಿಲ್ (47) ಮತ್ತು ನೂರಾಲ್‌ಬೆಟ್ಟುವಿನ ವಿಜಯ ಕುಮಾರ್ ಎಂಬವರ ನಡುವೆ ಲೀಸ್ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಗಿ ಜೋಸೆಫ್‌ಗೆ ಗಾಯವಾದ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇಡುಕ್ಕಿ ಮಣಕ್ಕಾಡ್‌ನ ಜೋಸೆಫ್ ಅವರು ವಿಜಯ ಕುಮಾರ್ ಅವರ ನೂರಾಲ್‌ಬೆಟ್ಟುವಿನಲ್ಲಿರುವ ತೋಟವನ್ನು ಲೀಸ್‌ಗೆ ಪಡೆದುಕೊಂಡಿದ್ದು,ಅಲ್ಲಿಯೇ ಇರುವ ಪುಷ್ಪಾ ನಿವಾಸ್ ಮನೆಯಲ್ಲಿ ವಾಸವಾಗಿದ್ದರು. ಸೆ.16ರಂದು ವಿಜಯ ಕುಮಾರ್ ಮನೆಗೆ ಬಂದು ಲೀಸ್ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಡಿದ್ದು, ಈ ಸಂದರ್ಭದಲ್ಲಿ ಇಬ್ಬರ ನಡುವೆ ತಳ್ಳಾಟ, ದೂಡಾಟ ನಡೆದು ಜೋಸೆಫ್ ಅವರ ಕಾಲಿಗೆ ಏಟಾಗಿದೆ. ಈ ಕುರಿತು ವಿಜಯ್ ಕುಮಾರ್ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.
ತೋಟದ ಲೀಸ್ ವಿವಾದ; ಹೊಡೆದಾಟದಲ್ಲಿ ಗಾಯ
