Sunday, October 2, 2022
spot_img
Homeಸುದ್ದಿಮಠಮಾನ್ಯಗಳಿಗೆ 400 ಕೋ.ರೂ. ಅನುದಾನ

ಮಠಮಾನ್ಯಗಳಿಗೆ 400 ಕೋ.ರೂ. ಅನುದಾನ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ಮಂಡಿಸಿದ 2022-23ನೇ ಸಾಲಿನ ಪೂರಕ ಅಂದಾಜಿನಲ್ಲಿ ಮಠಮಾನ್ಯಗಳಿಗೆ ಬರೋಬ್ಬರಿ 400 ಕೋಟಿ ರೂ. ಹೆಚ್ಚುವರಿಯಾಗಿ ಹಂಚಿಕೆ ಮಾಡಿದ್ದಾರೆ.
ವಿಧಾನಸಭೆಯಲ್ಲಿ ಈ ಸಾಲಿನ ಮೊದಲ ಪೂರಕ ಅಂದಾಜು ಮಂಡಿಸಿದ ಸಿಎಂ ಬೊಮ್ಮಾಯಿ ಅವರು, ಸುಮಾರು 14,762 ಕೋಟಿ ರೂ.ಗಳ ಬೇಡಿಕೆ ಇದಾಗಿದ್ದು, ಯಾವ ಇಲಾಖೆಗೆ ಎಷ್ಟು ಮೊತ್ತ ಎಂಬ ವಿವರಣೆ ನೀಡಿದರು.
‘ರೈತ ವಿದ್ಯಾನಿಧಿ’ ಯೋಜನೆಗೆ 810 ಕೋಟಿ ರೂಪಾಯಿ, ಟ್ರಸ್ಟ್‌ ಮತ್ತು ಮಠಗಳಿಗೆ 400 ಕೋಟಿ ರೂಪಾಯಿ, ಟ್ಯಾಕ್ಸಿ ಚಾಲಕರ ಮಕ್ಕಳ ಉನ್ನತ ವಿದ್ಯಾಭ್ಯಾಸವನ್ನು ಉತ್ತೇಜಿಸಲು ವಿದ್ಯಾನಿಧಿ ಯೋಜನೆ ವಿಸ್ತರಿಸಲು ಮತ್ತು ಆರೋಗ್ಯ ಸೌಲಭ್ಯಕ್ಕಾಗಿ ವಿಶೇಷ ಯೋಜನೆ ರೂಪಿಸಲು 10 ಕೋಟಿ ಒದಗಿಸಲಾಗಿದೆ.
ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 188 ಕೋಟಿ ರೂ., ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 478 ಕೋಟಿ ರೂ., ಶಿಕ್ಷಣಕ್ಕೆ ರಾಜಸ್ವ ಲೆಕ್ಕದಲ್ಲಿ 1261 ಕೋಟಿ ರೂ…ಹೀಗೆ ಹಂಚಿಕೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!