Saturday, October 1, 2022
spot_img
Homeಸುದ್ದಿಸೆ.25ರಂದು ದೀನದಯಾಳ್ ಉಪಾಧ್ಯಾಯ ಜಯಂತಿ ಆಚರಣೆ

ಸೆ.25ರಂದು ದೀನದಯಾಳ್ ಉಪಾಧ್ಯಾಯ ಜಯಂತಿ ಆಚರಣೆ

ಕಾರ್ಕಳ: ಭಾರತೀಯ ಜನಸಂಘದ ಸಂಸ್ಥಾಪಕರಲ್ಲೊಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಜಯಂತಿ ದಿನವಾದ ಸೆ.25 ರಂದು ಬಿಜೆಪಿ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದೆ. ಬೆಳಗ್ಗೆ 10ಕ್ಕೆ ಜಯಂತಿ ಆಚರಣೆ ನಡೆಯಲಿದ್ದು, 11ಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ವೀಕ್ಷಣೆ‌ ಎಲ್ಲಾ ಬೂತ್‌ಗಳಲ್ಲಿ ನಡೆಯಲಿದೆ.
ಎಲ್ಲ ಬೂತ್‌ಗಳಲ್ಲಿ ಪಕ್ಷದ ಹಿರಿಯ ಕಾರ್ಯಕರ್ತರೊಬ್ಬರ ಮನೆಯಲ್ಲಿ ಬೂತ್ ವ್ಯಾಪ್ತಿಯ ಎಲ್ಲ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಬೆಳಿಗ್ಗೆ ಗಂಟೆ 10ಕ್ಕೆ ಸೇರಿ ಪಕ್ಷದ ಧ್ವಜದೊಂದಿಗೆ ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಭಾವಚಿತ್ರಕ್ಕೆ‌‌ ಪುಷ್ಪ ನಮನ ಸಲ್ಲಿಸಿ ಅವರ ಜೀವನಾದರ್ಶಗಳ ಬಗ್ಗೆ ಮಾಹಿತಿ‌ ವಿನಿಮಯ ಮಾಡಲಿದ್ದಾರೆ.‌ ಬಳಿಕ ಗಂಟೆ 11ಕ್ಕೆ ಪ್ರಧಾನಿ‌ ನರೇಂದ್ರ ಮೋದಿಯವರ ಜನಪ್ರಿಯ ಮನ್‌‌ ಕೀ ಬಾತ್ ಕಾರ್ಯಕ್ರಮದ‌ ನೇರ ಪ್ರಸಾರವನ್ನು ವೀಕ್ಷಣೆ ಮಾಡಲಾಗುವುದು.

LEAVE A REPLY

Please enter your comment!
Please enter your name here

Most Popular

error: Content is protected !!