ಕಾರ್ಕಳ : ಉಡುಪಿ ಮತ್ತು ದ.ಕ. ಜಿಲ್ಲೆಯ ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳಿಗಾಗಿ ಎನ್‌ಐಟಿಕೆ ಸುರತ್ಕಲ್‌ನಲ್ಲಿ ನಡೆದ Engiconnect 2022 ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಶ್ರೀ ಭುವನೇಂದ್ರ ಪ. ಪೂರ್ವ ಕಾಲೇಜಿನ ತಂಡ ಚಿನ್ನದ ಪದಕ ಗಳಿಸಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಸಾಣೂರು ತೇಜಸ್ ಕಾಮತ್, ಗೌತಮ್ ಪೈ, ಗೌರವ್ ಶೆಣೈ ಮತ್ತು ಗೌತಮ್ ತೆಂಡೂಲ್ಕರ್ ಅವರ ರಚಿಸಿದ ಮಾದರಿ ಪ್ರಥಮ ಸ್ಥಾನ ಪಡೆದಿದ್ದು, 40 ಸಾವಿರ ರೂ. ಬಹುಮಾನ ತಮ್ಮದಾಗಿಸಿಕೊಂಡಿದೆ. ಕಾಲೇಜಿನ 32 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪದವಿಪೂರ್ವ ವಿಭಾಗದ ಪ್ರಾಂಶುಪಾಲ ರಮೇಶ್ ಎಸ್.ಸಿ., ಭೌತಶಾಸ್ತ್ರ ಉಪನ್ಯಾಸಕಿ ಕವಿತಾ ಎ.ಆರ್., ರಸಾಯನಶಾಸ್ತ್ರ ಉಪನ್ಯಾಸಕ ಮಹೇಶ್ ಕುಮಾರ್ ಮತ್ತು ಹಿಂದಿ ಉಪನ್ಯಾಸಕಿ ಮಾಲತಿ ಪ್ರಭು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿರುತ್ತಾರೆ.
ವಿಜ್ಞಾನ ಮಾದರಿ ಸ್ಪರ್ಧೆ : ಭುವನೇಂದ್ರ ಪದವಿ ಪೂರ್ವ ಕಾಲೇಜು ತಂಡ ಪ್ರಥಮ
