ಅಧ್ಯಕ್ಷರಾಗಿ ರಾಜೇಶ್ ದೇವಾಡಿಗ, ಪ್ರ.ಕಾರ್ಯದರ್ಶಿಯಾಗಿ ಪ್ರದೀಪ್ ದೇವಾಡಿಗ
ಕಾರ್ಕಳ : ಬೆಳ್ಮಣ್ ವಲಯ ದೇವಾಡಿಗ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ರಾಜೇಶ್ ದೇವಾಡಿಗ ನಂದಳಿಕೆ, ಪ್ರ. ಕಾರ್ಯದರ್ಶಿಯಾಗಿ ಪ್ರದೀಪ್ ದೇವಾಡಿಗ ಸೂಡ ಅವರು ಆಯ್ಕೆಯಾಗಿರುತ್ತಾರೆ. ಸೆ. 18ರಂದು ಬೆಳ್ಮಣ್ ಶ್ರೀ ಬ್ರಹ್ಮ ಗುರುನಾರಾಯಣ ಸಭಾಂಗಣದಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಖಜಾಂಚಿಯಾಗಿ ಶಿವಪ್ರಸಾದ್ ದೇವಾಡಿಗ ಬೆಳ್ಮಣ್, ಕಟ್ಟಡ ಸಮಿತಿ ಅಧ್ಯಕ್ಷರಾಗಿ ಎನ್.ಕೆ. ಶ್ರೀಧರ್, ಕಾರ್ಯದರ್ಶಿ ಸುನೀಲ್ ದೇವಾಡಿಗ ಬೋಳ, ಮಹಿಳೆ ಘಟಕದ ಕಾರ್ಯದರ್ಶಿಯಾಗಿ ಶುಭ ಗಣೇಶ್ ದೇವಾಡಿಗ, ಜೊತೆ ಕಾರ್ಯದರ್ಶಿಯಾಗಿ ಯಶೋಧ ದೇವಾಡಿಗ ಆಯ್ಕೆಗೊಂಡಿರುತ್ತಾರೆ.