ಬೆಂಗಳೂರು: ಮೂನ್‌ಲೈಟಿಂಗ್ ಆರೋಪ ಎದುರಿಸುತ್ತಿದ್ದ 300 ಸಿಬ್ಬಂದಿಯನ್ನು ವಿಪ್ರೊ ಕಿತ್ತುಹಾಕಿದೆ. ಈ 300 ಮಂದಿ ಬೇರೆ ಕಂಪನಿಗಳಿಗೂ ಕೆಲವು ತಿಂಗಳಿಂದ ಕೆಲಸ ಮಾಡುತ್ತಿರುವುದು ಪತ್ತೆಯಾದ ಬಳಿಕ ಅವರನ್ನು ನೌಕರಿಯಿಂದ ವಜಾಗೊಳಿಸಲಾಗಿದೆ ಎಂದು ವಿಪ್ರೊ ಅಧ್ಯಕ್ಷ ಕೊಷದ್ ಪ್ರೇಮ್‌ಜಿ ಹೇಳಿದ್ದಾರೆ.
ಮೂನ್‌ಲೈಟಿಂಗ್ ಎಂದರೇನು?
ಒಂದು ಕಂಪನಿಯ ಖಾಯಂ ನೌಕರ ಬೇರೊಂದು ಕಂಪನಿಗೆ ಬಿಡುವಿನ ವೇಳೆಯಲ್ಲಿ ಕೆಲಸ ಮಾಡುವುದನ್ನು ಕಾರ್ಪೋರೇಟ್ ಭಾಷೆಯಲ್ಲಿ ಮೂನ್‌ಲೈಟಿಂಗ್ ಎನ್ನುತ್ತಾರೆ. ಸಾಮಾನ್ಯವಾಗಿ ರಾತ್ರಿ ಹೊತ್ತು ಈ ಕೆಲಸ ಮಾಡುವುದರಿಂದ ಮೂನ್‌ಲೈಟಿಂಗ್ ಎಂಬ ಹೆಸರು ಬಂದಿದೆ. ವರ್ಕ್ ಫ್ರಂ ಹೋಮ್ ಇದ್ದವರು ಇದನ್ನು ಮಾಡುತ್ತಾರೆ. ಕೊರೊನಾ ಸಂದರ್ಭದಲ್ಲಿ ಅನೇಕ ಮಂದಿ ಹೆಚ್ಚುವರಿ ಸಂಪಾದನೆಗಾಗಿ ಒಂದಕ್ಕಿಂತ ಹೆಚ್ಚು ಕೆಲ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ನಿರ್ದಿಷ್ಟವಾಗಿ ಸಾಫ್ಟ್‌ವೇರ್ ಕಂಪನಿಗಳು ಮೂನ್‌ಲೈಟಿಂಗ್ ಅನ್ನು ಅಪರಾಧ ಎಂದು ಪರಿಗಣಿಸುತ್ತವೆ.
ಇದೀಗ ಟಾಟಾ, ಮಹೀಂದ್ರದಂಥ ದೊಡ್ಡ ಕಂಪನಿಗಳು ಮೂನ್‌ಲೈಟಿಂಗ್ ಅನ್ನು ಗಂಭಿರವಾಗಿ ಪರಿಗಣಿಸಿವೆ. ಇದು ನೌಕರರ ದಕ್ಷತೆ ಮತ್ತು ಸಾಮರ್ಥ್ಯ ಕುಸಿಯುವಂತೆ ಮಾಡುವುದು ಮಾತ್ರವಲ್ಲದೆ, ನೈತಿಕತೆಯ ಪ್ರಶ್ನೆಯೂ ಇದರಲ್ಲಿ ಇದೆ ಎಂಬುದಾಗಿ ಈ ಕಂಪನಿಗಳ ಸಿಇಒಗಳು ಹೇಳುತ್ತಿದ್ದಾರೆ.
ಈ ನಡುವೆ ಇನ್ಫೋಸಿಸ್ ಮೂನ್‌ಲೈಟಿಂಗ್ ಮಾಡುತ್ತಿರುವ ನೌಕರರಿಗೆ ಗಂಭಿರವಾದ ಎಚ್ಚರಿಕೆ ನೀಡಿದ್ದು, ಪತ್ತೆಯಾದರೆ ಕಠಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಹೇಳಿದೆ.
ಮೂನ್‌ಲೈಟಿಂಗ್ : ವಿಪ್ರೊದ 300 ನೌಕರರು ವಜಾ
