ಉಡುಪಿ : ಮಂಗಳೂರಿನಲ್ಲಿ ನಡೆದ ಎನ್‌ಐಎ ದಾಳಿ ಖಂಡಿಸಿ ಪಿಎಫ್‌ಐ ಸಂಘಟನೆ ಕಾರ್ಯಕರ್ತರು ಅನುಮತಿ ಪಡೆಯದೇ ರಸ್ತೆ ತಡೆದು ಸಂಚಾರಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಘಟನೆ ಸೆ. 22ರಂದು ಸಂಜೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಡಯಾನ ವೃತ್ತ ಬಳಿ ಪಿಎಫ್‌ಐ ಕಾರ್ಯಕರ್ತರು ರಸ್ತೆ ತಡೆದಿದ್ದು, ಈ ವೇಳೆ ರಸ್ತೆಯಿಂದ ತೆರವಾಗುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾಗ್ಯೂ ಪ್ರತಿಭಟನಕಾರರು ಸ್ಪಂದಿಸದ ಹಿನ್ನೆಲೆಯಲ್ಲಿ ಲಾಠಿ ಚಾರ್ಜ್ ಮಾಡಲಾಗಿದೆ. ಫಿಎಫ್‌ಐನ 15 ಮಂದಿ ಕಾರ್ಯಕರ್ತರನ್ನು ಈ ವೇಳೆ ಪೊಲೀಸರು ವಶಕ್ಕೆ ಪಡೆದಿರುತ್ತಾರೆ.
ಎನ್‌ಐಎ ದಾಳಿ ಖಂಡಿಸಿ ಉಡುಪಿಯಲ್ಲಿ ಪಿಎಫ್‌ಐ ಪ್ರತಿಭಟನೆ
