Sunday, October 2, 2022
spot_img
Homeಸುದ್ದಿಮೋದಿಗೆ ಮರಣ ದಂಡನೆಯಾಗಬೇಕೆಂದು ಬಯಸಿದ್ದ ತೀಸ್ತಾ ಸೆಟಲ್ವಾಡ್‌

ಮೋದಿಗೆ ಮರಣ ದಂಡನೆಯಾಗಬೇಕೆಂದು ಬಯಸಿದ್ದ ತೀಸ್ತಾ ಸೆಟಲ್ವಾಡ್‌

ಸಾಕ್ಷಿಗಳ ಸೃಷ್ಟಿಸಿ ಸಿಲುಕಿಸಲು ಯತ್ನ; ಸರಕಾರಿ ಅಧಿಕಾರಿಗಳ ಸಾಥ್‌ – ಚಾರ್ಜ್‌ಶೀಟಿನಲ್ಲಿದೆ ಸಂಚಿನ ಕುರಿತು ಗಂಭೀರ ಆರೋಪ

ಹೊಸದಿಲ್ಲಿ: 2002ರ ಗೋದ್ರೋತ್ತರ ದಂಗೆಗಳ ಪ್ರಕರಣದಲ್ಲಿ ಗುಜರಾತ್ ಸರ್ಕಾರಕ್ಕೆ ಅಪಖ್ಯಾತಿ ಉಂಟು ಮಾಡಲು ಹಾಗೂ ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ ಅವರನ್ನು ಮರಣದಂಡನೆ ಶಿಕ್ಷೆಗೆ ಗುರಿ ಮಾಡುವುದಕ್ಕೆ ಸೆಟಲ್ವಾಡ್ ಸಂಚು ರೂಪಿಸಿದ್ದರು ಎಂದು ಎಸ್ಐಟಿ ದಾಖಲಿಸಿರುವ ಚಾರಗಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ.
ಸೆಟಲ್ವಾಡ್, ಮಾಜಿ ಪೊಲೀಸ್ ಮಹಾ ನಿರ್ದೇಶಕ ಆರ್. ಬಿ. ಶ್ರೀಕುಮಾರ್ (ನಿವೃತ್ತ) ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ವಿರುದ್ಧದ ಗಲಭೆ ಪ್ರಕರಣದಲ್ಲಿ ಪುರಾವೆಗಳ ಸೃಷ್ಟಿ ಮಾಡಿದ ಆರೋಪದ ಸಂಬಂಧ 100 ಪುಟಗಳ ಚಾರ್ಜ್‌ಶೀಟ್‌ನ್ನು ಅಹ್ಮದಾಬಾದ್ ಮೆಟ್ರೋ ಕೋರ್ಟ್‌ಗೆ ಸಲ್ಲಿಸಲಾಗಿದೆ.
ಎಸ್ಐಟಿ ಪ್ರಕಾರ, ಆರೋಪಿ ತೀಸ್ತಾ ಸೆಟಲ್ವಾಡ್ ಅಂದಿನ ಗುಜರಾತ್‌ ಸಿಎಂ ನರೇಂದ್ರ ಮೋದಿ ಅವರಿಗೆ ಮರಣದಂಡನೆ ಶಿಕ್ಷೆಯಾಗುವಂತೆ ಸಾಕ್ಷಿಗಳನ್ನು ಸೃಷ್ಟಿಸಲು ಸಂಚು ರೂಪಿಸಿದ್ದರು. ಸರ್ಕಾರಿ ಅಧಿಕಾರಿಯಾಗಿದ್ದರೂ ಆರ್. ಬಿ. ಶ್ರೀಕುಮಾರ್ ಹಾಗೂ ಸಂಜೀವ್ ಭಟ್ ತೀಸ್ತಾಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು ಹಾಗೂ ಅದನ್ನು ಅಧಿಕೃತ ಎಂಟ್ರಿಗಳಿಗೆ ಸೇರಿಸಿದ್ದರು ಎಂದು ಎಸ್ಐಟಿ ತಿಳಿಸಿದೆ.
ಆರೋಪಿಗಳು ನರೇಂದ್ರ ಮೋದಿ ಅವರ ರಾಜಕೀಯ ಭವಿಷ್ಯವನ್ನು ಅಂತ್ಯಗೊಳಿಸಲು ಬಯಸಿದ್ದರು ಹಾಗೂ ಅವರ ಖ್ಯಾತಿಗೆ ಧಕ್ಕೆ ಉಂಟುಮಾಡಲು ಬಯಸಿದ್ದರು, ಇದಕ್ಕಾಗಿ ನಕಲಿ ದಾಖಲೆ, ಅಫಿಡವಿಟ್‌ಗಳನ್ನು ಸೃಷ್ಟಿಸಲು ವಕೀಲರ ಪಡೆಯನ್ನೇ ನೇಮಕ ಮಾಡಿಕೊಳ್ಳಲಾಗಿತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!