Saturday, October 1, 2022
spot_img
Homeಕ್ರೀಡೆಅಂಗನವಾಡಿ ಕಾರ್ಯಕರ್ತೆ ಶಾಂತಕುಮಾರಿ ರಾಷ್ಟ್ರಮಟ್ಟದಲ್ಲಿ ಆರು ಚಿನ್ನದ ಪದಕ ಗಳಿಕೆ

ಅಂಗನವಾಡಿ ಕಾರ್ಯಕರ್ತೆ ಶಾಂತಕುಮಾರಿ ರಾಷ್ಟ್ರಮಟ್ಟದಲ್ಲಿ ಆರು ಚಿನ್ನದ ಪದಕ ಗಳಿಕೆ

ಮಧ್ಯಪ್ರದೇಶ : ಸಂಯುಕ್ತ ಭಾರತೀಯ ಖೇಲ್‌ ಫೌಂಡೇಶನ್‌ನ 7ನೇ ರಾಷ್ರೀಯ ಕ್ರೀಡಾಕೂಟವು ಮಧ್ಯಪ್ರದೇಶದ ಇಂಧೋರನ ದಾವು ಯೂನಿವರ್ಸಿಟಿ ಕ್ಯಾಂಪಸ್‌ ಸೆ. 16 ರಿಂದ 19 ರವರೆಗೆ ಜರುಗಿದ್ದು, ಮಂಗಳೂರಿನ ಉರ್ವಾದ ಅಂಗನವಾಡಿ ಕಾರ್ಯಕರ್ತೆ ಶಾಂತಕುಮಾರಿ ಕರ್ನಾಟಕವನ್ನು ಪ್ರತಿನಿಧಿಸಿ 6 ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಉದ್ದಜಿಗಿತ, ಎತ್ತರ ಜಿಗಿತ, ಟ್ರಿಪಲ್‌ ಜಂಪ್‌, ಯೋಗಾ, ಈಟಿ ಎಸೆತ ಮತ್ತು ಹರ್ಡಲ್ಸ್‌ನಲ್ಲಿ ಪ್ರಥಮ ಸ್ಥಾನಗಳಿಸಿ ಆರು ಚಿನ್ನದ ಪದಕವನ್ನು ಗೆದ್ದಿದ್ದಾರೆ. ಹಲವು ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿರುವ ಈಕೆ ಊರ್ವಾ ಅಂಗನವಾಡಿ ಕಾರ್ಯಕರ್ತೆಯಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ.

ಶಾಂತಕುಮಾರಿ ಗಳಿಸಿರುವ ಆರು ಚಿನ್ನದ ಪದಕಗಳು

LEAVE A REPLY

Please enter your comment!
Please enter your name here

Most Popular

error: Content is protected !!