Saturday, October 1, 2022
spot_img
Homeಸ್ಥಳೀಯ ಸುದ್ದಿಮೋದಿ ಜನುಮದಿನದ ಅಂಗವಾಗಿ ಮುಂಡ್ಕೂರು ಮಹಾಶಕ್ತಿಕೇಂದ್ರದಿಂದ ಸೇವಾ ಪಾಕ್ಷಿಕ

ಮೋದಿ ಜನುಮದಿನದ ಅಂಗವಾಗಿ ಮುಂಡ್ಕೂರು ಮಹಾಶಕ್ತಿಕೇಂದ್ರದಿಂದ ಸೇವಾ ಪಾಕ್ಷಿಕ

ಕಾರ್ಕಳ : ಪ್ರಧಾನಿ ನರೇಂದ್ರ ಮೋದಿಯವರ 72ನೇ ಹುಟ್ಟುಹಬ್ಬದ ಅಂಗವಾಗಿ ಮುಂಡ್ಕೂರು ಬಿಜೆಪಿ ಮಹಾಶಕ್ತಿ ಕೇಂದ್ರ ಮಹಿಳಾ ಮೋಚಾ೯ ವತಿಯಿಂದ ಸೇವಾ ಪಾಕ್ಷಿಕ ಕಾರ್ಯಕ್ರಮ ಸೆ. 21ರಂದು ಬೆಳ್ಮಣ್ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನೆರವೇರಿತು. ಬೆಳ್ಮಣ್ ಸರಕಾರಿ ಆಸ್ಪ್ರತ್ರೆಯ ಬಸವರಾಜ್ ಹಾಗೂ ಸಿಸ್ಟರ್ ಸುಭಾಷಿಣಿ ಆರೋಗ್ಯ ಮಾಹಿತಿ ನೀಡಿದರು.‌ ಬೆಳ್ಮಣ್‌ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗೋಪಾಲ್, ಮ. ಮೋ. ಮುಂಡ್ಕೂರು ಮಹಾಶಕ್ತಿ ಕೇಂದ್ರದ ಪ್ರಧಾನ ಕಾಯ೯ದಶಿ೯ ಶಶಿಕಲಾ, ಉಪಾಧ್ಯಕ್ಷರಾದ ಆಶಾ ದೇವೇಂದ್ರ ಶೆಟ್ಟಿ ಮತ್ತು ಪುಷ್ಪಾ ಸತೀಶ್ ಪೂಜಾರಿ, ಇನ್ನಾ ಗ್ರಾಮ ಸಮಿತಿ ಮ. ಮೋ. ಅಧ್ಯಕ್ಷೆ ಅರುಣ ಶೆಟ್ಟಿ, ಮುಂಡ್ಕೂರು ಗ್ರಾಮ ಸಮಿತಿ ಮ. ಮೋ. ಅಧ್ಯಕ್ಷೆ ಶುಭಾ ಪಿ. ಶೆಟ್ಟಿ, ಸದಸ್ಯೆ ರೇಣುಕಾ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಕಾಯ೯ದಶಿ೯ ರೇಷ್ಮಾ ಉದಯ್ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಮ. ಮೋ. ಮುಂಡ್ಕೂರು ಮಹಾಶಕ್ತಿಕೇಂದ್ರದ ಅಧ್ಯಕ್ಷೆ ಮಂಜುಳಾ ಶೆಟ್ಟಿ ಸ್ವಾಗತಿಸಿ, ಶಿಕ್ಷಕಿ ಜಯಂತಿ ಶೆಟ್ಟಿ ನಿರೂಪಿಸಿದರು. ಮಂಡಲ ಮ. ಮೋ. ಕಾಯ೯ಕಾರಿಣಿ ಸದಸ್ಯೆ ಅಮಿತಾ ಪೂಜಾರಿ ವಂದಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!