Sunday, October 2, 2022
spot_img
Homeಸುದ್ದಿಭಾರತ್‌ ಜೋಡೋ ಯಾತ್ರೆಯಲ್ಲಿ ಸಾವರ್ಕರ್‌ ಫೋಟೊ!

ಭಾರತ್‌ ಜೋಡೋ ಯಾತ್ರೆಯಲ್ಲಿ ಸಾವರ್ಕರ್‌ ಫೋಟೊ!


ಪ್ರಿಂಟಿಂಗ್‌ ಮಿಸ್ಟೇಕ್‌ ಎಂದ ಕಾಂಗ್ರೆಸ್‌

ತಿರುವನಂತಪುರಂ: ರಾಹುಲ್‌ ಗಾಂಧಿಯ ಭಾರತ ಜೋಡೋ ಯಾತ್ರೆಯಲ್ಲಿ ದಿನಕ್ಕೊಂದು ಎಡವಟ್ಟು ಆಗುತ್ತಿದೆ. ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಯಾತ್ರೆಯನ್ನು ಸ್ವಾಗತಿಸಲು ಹಾಕಿದ್ದ ಬ್ಯಾನರ್‌ನಲ್ಲಿ ವೀರ ಸಾವರ್ಕರ್‌ ಫೋಟೋ ಹಾಕಿ ಈಗ ಪಕ್ಷ ಮುಜುಗರ ಅನುಭವಿಸುತ್ತಿದೆ. ಇದು ಮುದ್ರಣ ದೋಷದಿಂದ ಆದ ಪ್ರಮಾದ ಎಂದು ಪಕ್ಷ ಸಮಜಾಯಿಷಿ ಹೇಳಿದ್ದರೂ ಟ್ರೋಲ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ.
ಯಾತ್ರೆ ಕೇರಳದ ಎರ್ನಾಕುಲಂ ಜಿಲ್ಲೆಯನ್ನು ತಲುಪಿದಾಗ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳ ಮಧ್ಯೆ ಸಾವರ್ಕರ್‌ ಫೋಟೋ ಹಾಕಿರುವುದು ಕಂಡು ಬಂದಿದೆ. ಯಾತ್ರೆಯ ಪೋಸ್ಟರ್‌ನಲ್ಲಿ ವಿಡಿ ಸಾವರ್ಕರ್ ಫೋಟೋ ಇತರೆ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿರುವ ಫೋಟೋ ಇತ್ತು. ಆದಾಗ್ಯೂ, ಕಾಂಗ್ರೆಸ್ ಸಾವರ್ಕರ್ ಅವರನ್ನು ಎಂದಿಗೂ ಸ್ವಾತಂತ್ರ್ಯ ಹೋರಾಟಗಾರ ಎಂದು ಪರಿಗಣಿಸಿಲ್ಲ. ಅವರು ಬ್ರಿಟಿಷರ ವಿರುದ್ಧ ಹೋರಾಡುವ ಬದಲು ಕ್ಷಮೆಯಾಚಿಸಿದರು ಎಂದು ಹೇಳಿ ಲೇವಡಿ ಮಾಡುತ್ತಿದೆ.
ಕೇರಳದ ಸ್ವತಂತ್ರ ಶಾಸಕ ಪಿ.ವಿ. ಅನ್ವರ್ ಅವರು ಈ ಬ್ಯಾನರ್‌ ಗಮನಿಸಿ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಚೆಂಗಮನಾಡಿನಲ್ಲಿ ಇರಿಸಲಾಗಿರುವ ಬೋರ್ಡ್‌ಗಳಲ್ಲಿ ಸಾವರ್ಕರ್ ಅವರ ಫೋಟೋ ಇದೆ ಎಂದು ಅನ್ವರ್ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿ ನಂತರ ಕಾರ್ಯಕರ್ತರು ಅದನ್ನು ಮಹಾತ್ಮ ಗಾಂಧಿಯವರ ಚಿತ್ರದಿಂದ ಮುಚ್ಚಿದರು ಎಂದು ಬರೆದಿದ್ದಾರೆ. ಮಹಾತ್ಮಾ ಗಾಂಧಿಯವರ ಚಿತ್ರದಿಂದ ಸಾವರ್ಕರ್ ಅವರ ಚಿತ್ರವನ್ನು ಮುಚ್ಚುವ ಮೂಲಕ ಕಾಂಗ್ರೆಸ್ ತನ್ನ ತಪ್ಪನ್ನು ಸರಿಪಡಿಸಿದೆ ಎಂದು ಶಾಸಕರು ಬರೆದಿದ್ದಾರೆ.
ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟ್ವೀಟ್ , ರಾಹುಲ್‌ಜೀ, ನೀವು ಎಷ್ಟೇ ಇತಿಹಾಸವನ್ನು ಮರೆಮಾಚಲು ಪ್ರಯತ್ನಿಸಿದರೂ ಸತ್ಯ ಹೊರಬರುತ್ತದೆ ಎಂದು ಕಾಲೆಳೆದಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!