Saturday, October 1, 2022
spot_img
Homeಸುದ್ದಿಮಹಿಳೆಯರ ಉಡುಪನ್ನು ಧರ್ಮ ನಿರ್ಬಂಧಿಸಬಾರದು

ಮಹಿಳೆಯರ ಉಡುಪನ್ನು ಧರ್ಮ ನಿರ್ಬಂಧಿಸಬಾರದು

ಇರಾನ್‌ ಮಹಿಳೆಯರನ್ನು ಬೆಂಬಲಿಸಿ ಸದ್ಗುರು ಹೇಳಿಕೆ

ಹೊಸದಿಲ್ಲಿ: ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಇರಾನ್‌ ಮಹಿಳೆಯರನ್ನು ಬೆಂಬಲಿಸಿರುವ ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಮಹಿಳೆಯರು ಹೇಗೆ ಡ್ರೆಸ್ ಮಾಡಬೇಕು ಎಂಬುದನ್ನು ಧರ್ಮ ನಿರ್ಧರಿಸಬಾರದು ಎಂದು ಪ್ರತಿಪಾದಿಸಿದ್ದಾರೆ.
ಮಹಿಳೆಯರು ಹೇಗೆ ಉಡುಗೆ ತೊಡಬೇಕು ಎಂಬುದನ್ನು ಧಾರ್ಮಿಕ ವ್ಯಕ್ತಿಗಳು ನಿರ್ಧರಿಸಬಾರದು. ತಮಗಿಷ್ಟವಾದ ಉಡುಪು ಧರಿಸಸುವುದನ್ನು ಮಹಿಳೆಯರು ನಿರ್ಧರಿಸಲಿ. ಉಡುಪು ಧರಿಸಿದ್ದಕ್ಕಾಗಿ ಯಾರನ್ನಾದರೂ ಶಿಕ್ಷಿಸುವ ಈ ಪ್ರತೀಕಾರದ ಧಾರ್ಮಿಕ ಸಂಸ್ಕೃತಿ ಅಂತ್ಯಗೊಳ್ಳಲಿ ಎಂದು ಹೇಳಿದ್ದಾರೆ.
ಇರಾನ್‌ನ ತಬ್ರಿಜ್, ರಾಶ್ತ್, ಇಸ್ಫಹಾನ್ ಮತ್ತು ಶಿರಾಜ್ ಸೇರಿದಂತೆ ಇರಾನ್‌ನ ಕನಿಷ್ಠ 15 ನಗರಗಳಲ್ಲಿ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ. ಪೊಲೀಸರು ಅಶ್ರುವಾಯು ಪ್ರಯೋಗಿಸಿ ಪ್ರತಿಭಟನಾಕಾರರನ್ನು ಚದುರಿಸಲು ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರತಿಭಟನಾಕಾರರನ್ನು ಬಂಧಿಸಲು ಆರಂಭಿಸಿದ್ದಾರೆ. ಅಮಿನಿಯ ತವರು ಪ್ರಾಂತ್ಯದಲ್ಲಿ ಪ್ರತಿಭಟನೆಯ ಸಮಯದಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಅಮಿನಿಯ ಪೋಷಕರಿಗೆ ನ್ಯಾಯಯುತ ತನಿಖೆಯ ಭರವಸೆ ನೀಡಿದ ನಂತರವೂ ಪ್ರತಿಭಟನೆಗಳು ಮುಂದುವರಿದಿದೆ.

LEAVE A REPLY

Please enter your comment!
Please enter your name here

Most Popular

error: Content is protected !!