Saturday, October 1, 2022
spot_img
Homeಅಂಕಣಕಾನೂನು ಕಣಜ : ಸಿವಿಲ್ ನ್ಯಾಯಾಲಯಗಳ ಅಧಿನಿಯಮ 1964

ಕಾನೂನು ಕಣಜ : ಸಿವಿಲ್ ನ್ಯಾಯಾಲಯಗಳ ಅಧಿನಿಯಮ 1964

ಮೇಲ್ಕಾಣಿಸಿದ ಅಧಿನಿಯಮದ ಪ್ರಕಾರ ನಮ್ಮ ದೇಶದ ಪ್ರತಿಯೊಂದು ರಾಜ್ಯದಲ್ಲಿ ಆಯಾಯ ರಾಜ್ಯಗಳಿಗೆ ಅನ್ವಯವಾಗುವಂತಹ ಕಾನೂನಿಗೆ ಅನುಗುನವಾಗಿ ಜಿಲ್ಲಾ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಲಾಗಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿ ಜಿಲ್ಲಾ ನ್ಯಾಯಾಲಯಗಳು, ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶರುಗಳ ನ್ಯಾಯಾಲಯಗಳು ಮತ್ತು ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶರುಗಳ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದ್ದು ಅವುಗಳ ಕಾರ್ಯ, ಅಧಿಕಾರ ಮತ್ತು ನ್ಯಾಯಿಕ ವ್ಯಾಪ್ತಿಯನ್ನು ಕರ್ನಾಟಕ ಸಿವಿಲ್ ನ್ಯಾಯಾಲಯಗಳ ಕಾಯ್ದೆ 1964 ರ ಪ್ರಕಾರ ವಿಂಗಡಿಸಿ ವಿವರಿಸಲಾಗಿರುತ್ತದೆ. ಈ ಪ್ರಕಾರ ರಾಜ್ಯ ಸರಕಾರವು ಉಚ್ಚ ನ್ಯಾಯಾಲಯದೊಂದಿಗೆ ಸಮಾಲೋಚಿಸಿ ಪ್ರತಿ ಜಿಲ್ಲೆಗೆ ಜಿಲ್ಲಾ ನ್ಯಾಯಾಧೀಶರನ್ನು ಹಾಗೂ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನೇಮಕಾತಿಯನ್ನು ಮಾಡಬಹುದಾಗಿದೆ. ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವನ್ನು ಸರಕಾರವು ಉಚ್ಚ ನ್ಯಾಯಾಲಯದೊಂದಿಗೆ ಸಮಾಲೋಚಿಸಿ ಆಯಾಯ ಜಿಲ್ಲೆಯೊಳಗೆ ಸ್ಥಾಪಿಸಬಹುದಾಗಿದೆ. ಸದ್ರಿ ನ್ಯಾಯಾಲಯವು ಪ್ರಸ್ತುತ ನಿಯಮದ ಪ್ರಕಾರ ಐದು ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಮೌಲ್ಯ ಮಾಪನೆಯುಳ್ಳ ವಿವಾದಗಳನ್ನು ತನಿಖೆ ಮಾಡಿ ತೀರ್ಮಾನಿಸುವ, ವೈವಾಹಿಕ ವಿವಾದಕ್ಕೆ ಸಂಬಂಧಪಟ್ಟ ಕೆಲವು ಪ್ರಕರಣಗಳನ್ನು ತೀರ್ಮಾನಿಸುವ ಹಾಗೂ ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶರುಗಳ ನ್ಯಾಯಾಲಯಗಳ ತೀರ್ಪುಗಳ ಮೇಲಿನ ಅಪೀಲುಗಳನ್ನು ವಿಚಾರಿಸಿ ತೀರ್ಮಾನಿಸುವ ಮತ್ತು ಇನ್ನಿತರ ವಿಷಯಗಳಿಗೆ ಸಂಬಂಧಪಟ್ಟ ವಿವಾದಗಳನ್ನು ತೀರ್ಮಾನಿಸುವ ಅಧಿಕಾರವನ್ನು ಹೊಂದಿರುತ್ತದೆ. ಅದೇ ಪ್ರಕಾರ ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶರುಗಳ ನ್ಯಾಯಾಲಯವು ಐದು ಲಕ್ಷಕ್ಕಿಂತ ಕಡಿಮೆ ಮೌಲ್ಯ ಮಾಪನೆಯುಳ್ಳ ವಿವಾದಗಳನ್ನು ತನಿಖೆ ಮಾಡಿ ತೀರ್ಮಾನಿಸುವ, ಹಾಗೂ ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಪಟ್ಟಂತೆ ಆರೋಪಿಗಳ ಮೇಲಿನ ಪ್ರಕರಣಗಳು, ವೈವಾಹಿಕ ವಿವಾದಕ್ಕೆ ಸಂಬಂಧಪಟ್ಟ ಕೆಲವು ಪ್ರಕರಣಗಳನ್ನು ವಿಚಾರಿಸುವ ಮತ್ತಿತರ ಸ್ವರೂಪದ ಪ್ರಕರಣಗಳನ್ನು ವಿಚಾರಿಸಿ ತೀರ್ಮಾನಿಸುವ ಅಧಿಕಾರವನ್ನು ಹೊಂದಿರುತ್ತದೆ.

ಕೆ. ವಿಜೇಂದ್ರ ಕುಮಾರ್
ಹಿರಿಯ ವಕೀಲರು, ಕಾರ್ಕಳ
ಮೊ : 98452 32490/ 96116 82681

LEAVE A REPLY

Please enter your comment!
Please enter your name here

Most Popular

error: Content is protected !!