ಶೆಡ್‌ ಮೇಲೆ ಗೋಡೆ ಕುಸಿದು ಇಬ್ಬರು ಮಕ್ಕಳು ಸಾವು

ರಾಮನಗರ: ಶೆಡ್‌ ಮೇಲೆ ಕೊಟ್ಟಿಗೆಯ ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ರಾಮನಗರ ಜಿಲ್ಲೆಯ ಸೋಲೂರು ಎಂಬ ಗ್ರಾಮದಲ್ಲಿ ನಸುಕಿನ ಹೊತ್ತ ಸಂಭವಿಸಿದೆ.
ನೇಪಾಳಿ ಮೂಲದ ಕುಟುಂಬದ ಫರ್ಬಿನ್‌ (4) ಮತ್ತು ಇಶಿಕಾ (3) ಎಂಬಿಬ್ಬರು ಹಸುಳೆಗಳು ಗೋಡೆ ಕುಸಿದು ನಿದ್ದೆಯಲ್ಲೇ ಸಾವಿಗೀಡಾಗಿದ್ದಾರೆ. ಹೋಟೆಲ್‌ನಲ್ಲಿ ದುಡಿಯುವ ನೇಪಾಳಿ ಕುಟುಂಬ ದನದ ಕೊಟ್ಟಿಗೆಗೆ ಒತ್ತಿಕೊಂಡಿದ್ದ ಶೆಡ್‌ನಲ್ಲಿ ವಾಸವಾಗಿತ್ತು. ಘಟನೆಯಲ್ಲ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.
ಹೋಟೆಲ್‌ನಲ್ಲಿ ದುಡಿಯುವ ಈ ಕುಟುಂಬ ಶೆಡ್‌ ರೀತಿಯ ಮನೆಯಲ್ಲಿ ಬಾಡಿಗೆಗೆ ಇತ್ತು. ನಿನ್ನೆ ರಾತ್ರಿ ಸುರುರಿದ ಭಾರಿ ಮಳೆಗೆ ನಸುಕಿನ ಸುಮಾರು 2 ಗಂಟೆ ಹೊತ್ತಿಗೆ ಪಕ್ಕದ ಮನೆಯ ದನದ ಕೊಟ್ಟಿಗೆಯ ಗೋಡೆ ಈ ಶೆಡ್‌ ಮೇಲೆ ಬಿದ್ದಿದೆ.





























































































































































































































error: Content is protected !!
Scroll to Top