ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಅಧಿಕೃತವಾಗಿ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ಐಎ) ಹಸ್ತಾಂತರವಾಗಿದೆ.
ಕೇಂದ್ರ ಗೃಹ ಸಚಿವಾಲಯ ಈ ಸಂಬಂಧ ಆದೇಶ ಹೊರಡಿಸಿದೆ. ಈ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸುವಂತೆ ರಾಜ್ಯ ಸರ್ಕಾರ ಶಿಫಾರಸು ಮಾಡಿತ್ತು. ಕೇಂದ್ರ ಗೃಹ ಸಚಿವಾಲಯ ಆ.3ರಂದು ಈ ಬಗ್ಗೆ ಎನ್ಐಎ ಮಹಾನಿರ್ದೇಶಕರಿಗೆ ಆದೇಶ ನೀಡಿದೆ. ಪ್ರಕರಣ ಎನ್ಐಎ ಕಾಯ್ದೆ 2008ರ ಅಡಿಯಲ್ಲಿ ಬರುವ ಅಪರಾಧ ಎಂಬ ಅಭಿಪ್ರಾಯಕ್ಕೆ ಕೇಂದ್ರ ಬಂದಿದೆ. ಪ್ರಕರಣ ತೀವ್ರತೆ ಮತ್ತದರ ಅಂತರ್ ರಾಜ್ಯ ಪರಿಣಾಮಗಳನ್ನು ಪರಿಗಣಿಸಿ, ಆದೇಶಿಸಲಾಗಿದೆ ಎಂದು ತಿಳಿಸಲಾಗಿದೆ.
ಎನ್ಐಎಗೆ ಹಸ್ತಾಂತರ ವಿಳಂಬವಾಗಿರುವುದರಿಂದ ಆರೋಪಿಗಳ ಬಂಧನವಾಗಿಲ್ಲ, ಪೊಲೀಸರು ತಾವೇ ಆರೋಪಿಗಳನ್ನು ಹಿಡಿಯುವ ಉತ್ಸುಕತೆಯಲ್ಲಿ ಹಸ್ತಾಂತರ ವಿಳಂಬಿಸುತ್ತಿದ್ದಾರೆ. ಇದರಿಂದ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಸಮಯಾವಕಾಶ ನೀಡಿದಂತಾಗಿದೆ ಎಂಬ ಅಸಮಾಧಾನ ಇತ್ತು.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ಎನ್ಐಎಗೆ ಹಸ್ತಾಂತರ
Recent Comments
ಕಗ್ಗದ ಸಂದೇಶ
on