Friday, August 19, 2022
spot_img
Homeಸ್ಥಳೀಯ ಸುದ್ದಿದಿಢೀರ್‌ ಬ್ರೇಕ್‌ - ಬಸ್‌ನಿಂದ ಎಸೆಯಲ್ಪಟ್ಟ ವ್ಯಕ್ತಿ

ದಿಢೀರ್‌ ಬ್ರೇಕ್‌ – ಬಸ್‌ನಿಂದ ಎಸೆಯಲ್ಪಟ್ಟ ವ್ಯಕ್ತಿ

ಹೆಬ್ರಿ : ಚಲಿಸುತ್ತಿದ್ದ ಬಸ್‌ನಿಂದ ವ್ಯಕ್ತಿಯೋರ್ವರು ಎಸೆಯಲ್ಪಟ್ಟ ಘಟನೆ ಹೆಬ್ರಿ ಬಂಟರ ಭವನದ ತಿರುವಿನಲ್ಲಿ ನಡೆದಿದೆ. ತೀರ್ಥಹಳ್ಳಿ ತಾಲೂಕು ಬೆಳ್ಳಿಕೊಪ್ಪದ ನವೀನ್ ಡಿ.ಎನ್. ಅವರು ಆ. 3ರಂದು ಶ್ರೀ ಗಣೇಶ ಸರ್ವಿಸ್ ಮಿನಿ ಬಸ್ ಮುಂಭಾಗದ ಡೋರಿನ ಬಳಿ ಒಳಗಡೆ ನಿಂತುಕೊಂಡು ಕಾರ್ಕಳದಿಂದ ಶಿವಮೊಗ್ಗಕ್ಕೆ ಹೋಗುತ್ತಿರುವಾಗ ಹೆಬ್ರಿ ಬಂಟರ ಭವನದ ಬಳಿ ಬಸ್ ಚಾಲಕ ಮಂಜುನಾಥ ಎಂಬವರು ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಬಸ್ಸಿನಿಂದ ಕೆಳಕ್ಕೆ ಮಣ್ಣು ರಸ್ತೆಗೆ ಎಸೆಯಲ್ಪಟ್ಟಿರುತ್ತಾರೆ. ಪರಿಣಾಮ ಅವರ ಬಲಕಾಲಿನ ಮೂಳೆ ಮುರಿತವಾಗಿದೆ. ಈ ಕುರಿತು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!