ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಸಂದರ್ಶನಕ್ಕೆ ಲಭ್ಯ
ಕಾರ್ಕಳ : ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಇಲ್ಲಿ ಪ್ರತಿ ತಿಂಗಳ ಮೊದಲ ಶುಕ್ರವಾರ ಹೆಸರಾಂತ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಅವರು ಸಂದರ್ಶನಕ್ಕೆ ಲಭ್ಯರಿರುತ್ತಾರೆ. ಮಂಗಳೂರು ಕೆಎಂಸಿ ಕಾರ್ಡಿಯೋಲಜಿ ವಿಭಾಗದ ಮುಖ್ಯಸ್ಥರಾಗಿರುವ ಡಾ. ಪದ್ಮನಾಭ ಕಾಮತ್ ಅವರು ಕಾರ್ಡಿಯೋಲಜಿ ಎಟ್ ಡೋರ್ ಸ್ಟೆಪ್ಸ್ ಫೌಂಡೇಶನ್ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಾವಿರಕ್ಕೂ ಅಧಿಕ ಇಸಿಜಿ ಯಂತ್ರ ನೀಡಿರುತ್ತಾರೆ. ಮೂಲತಃ ಕಾರ್ಕಳದವರಾಗಿರುವ ಡಾ. ಕಾಮತ್ ಅವರು ಶ್ರೀ ಭುವನೇಂದ್ರ ಕಾಲೇಜಿನ ಹಳೆ ವಿದ್ಯಾರ್ಥಿ. ಪ್ರತಿ ತಿಂಗಳ ಮೊದಲ ಶುಕ್ರವಾರ ಕಾರ್ಕಳ ರೋಟರಿ ಆಸ್ಪತ್ರೆಯ ಓಪಿಡಿ ವಿಭಾಗದಲ್ಲಿ ಹೃದಯ ಸಂಬಂಧಿ ಕಾಯಿಲೆಯವರು ಬೆಳಿಗ್ಗೆ ಗಂಟೆ 10 ರಿಂದ 12.30 ರವರೆಗೆ ಸೇವೆಗೆ ಲಭ್ಯರಿರುವರು. ಹೆಚ್ಚಿನ ಮಾಹಿತಿಗಾಗಿ 9731601150 ಸಂಪರ್ಕಿಸಬಹುದಾಗಿದೆ.