ಕಂಸ ವಿವಾಹ ಮತ್ತು ಇಂದ್ರಜಿತು ಕಾಳಗ ಯಕ್ಷಗಾನ
ಕಾರ್ಕಳ : ಬಿಲ್ಲವ ಸಮಾಜ ಸೇವಾ ಸಂಘ ಕಾರ್ಕಳ ಇದರ ಆಶ್ರಯದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ ಇವರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ʼಕಂಸ ವಿವಾಹ ಮತ್ತು ಇಂದ್ರಜಿತು ಕಾಳಗʼ ಎಂಬ ಯಕ್ಷಗಾನವು ಆ. 13ರಂದು ಸಂಜೆ 6ರಿಂದ 11ರವರೆಗೆ ಬಿಲ್ಲವ ಸೇವಾ ಸಂಘದ ಬಯಲು ರಂಗಮಂದಿರಲ್ಲಿ ನಡೆಯಲಿದೆ.
ವಿಶ್ರಾಂತ ಪ್ರಾಂಶುಪಾಲ ಪ್ರೊ. ಪದ್ಮನಾಭ ಗೌಡ ದೀಪ ಪ್ರಜ್ವಲನೆಗೈಯಲಿದ್ದಾರೆ. ಉದ್ಯಮಿ ವಿಜಯ ಶೆಟ್ಟಿ, ಬಿಲ್ಲವ ಸೇವಾ ಸಂಘದ ಕಾರ್ಯದರ್ಶಿ ಪ್ರಭಾಕರ ಬಂಗೇರಾ ಉಪಸ್ಥಿತರಿರುವರು. ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ.ಆರ್. ರಾಜು ಅಧ್ಯಕ್ಷತೆ ವಹಿಸಲಿದ್ದಾರೆ.
ಸನ್ಮಾನ ಮಂಡಳಿ ಸಂಚಾಲಕ ಚಂದ್ರಶೇಖರ ಧರ್ಮಸ್ಥಳ, ಖ್ಯಾತ ಭಾಗವತರಾದ ಗಿರೀಶ್ ರೈ ಕಕ್ಕೆಪದವು, ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಟ ಅವರಿಗೆ ಇದೇ ಸಂದರ್ಭ ಸನ್ಮಾನ ನಡೆಯಲಿದೆ.
ಗಿರೀಶ್ ರೈ ಕಕ್ಕೆಪದವು, ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಟ ಭಾಗವತಿಕೆಯಲ್ಲಿ, ಚಂದ್ರಶೇಖರ ಸರಪಾಡಿ ಮತ್ತು ಶ್ರೀಧರ ವಿಟ್ಲ ಚೆಂಡೆ ಮತ್ತು ಮದ್ದಳೆಯಲ್ಲಿ, ವಸಂತ ಕುಮಾರ್ ವಾಮದಪದವು ಚಕ್ರತಾಳದಲ್ಲಿ ಸಹಕರಿಸಲಿದ್ದಾರೆ. ಚಂದ್ರಶೇಖರ್ ಧರ್ಮಸ್ಥಳ, ಶರತ್ ಶೆಟ್ಟಿ ತೀರ್ಥಹಳ್ಳಿ, ಬಂಟ್ವಾಳ ಜಯರಾಮ ಆಚಾರ್ಯ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಸತೀಶ್ ಗೌಡ ನೀರ್ಕೆರೆ, ಚರಣ್ ಗೌಡ, ವಸಂತ ಗೌಡ ಕಾಯರ್ತಡ್ಕ, ದಿವಾಕರ ರೈ ಸಂಪಾಜೆ, ಹರೀಶ್ ಶೆಟ್ಟಿ ಮಣ್ಣಾಪು, ಅರಳ ಗಣೇಶ್ ಶೆಟ್ಟ, ಸದಾಶಿವ ಆಚಾರ್ಯ ವೇಣೂರು, ಮಿಜಾರು ಬಾಲಕೃಷ್ಣ ಗೌಡ, ಬೆಳ್ಳಿಪ್ಪಾಡಿ ಮೋಹನ, ಶಿವಾನಂದ ಪೆರ್ಲ, ಶಿವರಾಜ್ ಬಜಕೂಡ್ಲು, ರೂಪೇಶ್ ಮೊದಲಾದ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ನಡೆಯಲಿದೆ. ಯಕ್ಷಗಾನ, ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಡಿ.ಆರ್. ರಾಜು ಮನವಿ ಮಾಡಿಕೊಂಡಿದ್ದಾರೆ.