Homeಜಿಲ್ಲಾಕರ್ತವ್ಯದಲ್ಲಿದ್ದಾಗಲೇ ಹೆಡ್ ಕಾನ್ಸ್ ಟೇಬಲ್ ಹೃದಯಾಘಾತದಿಂದ ಮೃತ್ಯು

Related Posts

ಕರ್ತವ್ಯದಲ್ಲಿದ್ದಾಗಲೇ ಹೆಡ್ ಕಾನ್ಸ್ ಟೇಬಲ್ ಹೃದಯಾಘಾತದಿಂದ ಮೃತ್ಯು

ಉಳ್ಳಾಲ : ಕೊಣಾಜೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ಆ. 6ರ ಶನಿವಾರ ನಿಧನ ಹೊಂದಿದರು. ಮೃತರನ್ನು ಪುತ್ತೂರು ತಾಲೂಕಿನ ಸವಣೂರು ನಿವಾಸಿ ಜಗನ್ನಾಥ ಎಂದು ಗುರುತಿಸಲಾಗಿದೆ. ಕಳೆದ 22 ವರ್ಷಗಳಿಂದ ಪೊಲೀಸ್ ಸೇವೆಯಲ್ಲಿದ್ದ ಜಗನ್ನಾಥ್ ಅವರು ಕೊಣಾಜೆ ಪೊಲೀಸ್ ಠಾಣೆ, ಉಳ್ಳಾಲ ಪೊಲೀಸ್ ಠಾಣೆ, ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಎಸ್.ಬಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಬೆಳಗ್ಗೆ ಕರ್ತವ್ಯದಲ್ಲಿದ್ದ ವೇಳೆ ಅಸ್ವಸ್ಥರಾದವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here

Latest Posts

error: Content is protected !!