Friday, August 19, 2022
spot_img
Homeಸುದ್ದಿಡೋಲೋ ಕಂಪನಿಯಿಂದ ಉಡುಗೊರೆ ಪಡೆದ ವೈದ್ಯರ ಮಾಹಿತಿ ನೀಡಲು ಸೂಚನೆ

ಡೋಲೋ ಕಂಪನಿಯಿಂದ ಉಡುಗೊರೆ ಪಡೆದ ವೈದ್ಯರ ಮಾಹಿತಿ ನೀಡಲು ಸೂಚನೆ

ಡೋಲೊ ಸೂಚಿಸಿದ ವೈದ್ಯರಿಗೆ ಚಳಿಜ್ವರ ಬರಿಸುವ ಆದೇಶ

ಹೊಸದಿಲ್ಲಿ: ಕೊರೋನ ಉತ್ತುಂಗದಲ್ಲಿದ್ದ ಸಮಯದಲ್ಲಿ ಬಹಳ ಜನಪ್ರಿಯವಾಗಿದ್ದ ಡೋಲೊ-650 ಮಾತ್ರೆಯನ್ನು ತಯಾರಿಸುವ ಕಂಪನಿ ಮೇಲೆ ಆದಾಯಕರ ದಾಳಿ ನಡೆದು ಸಾವಿರಾರು ಕೋಟಿ ರೂ. ತೆರಿಗೆ ವಂಚನೆ ಬಯಲಾದ ಬೆನ್ನಿಗೆ ಇದೀಗ ಈ ಕಂಪನಿಯಿಂದ ಕೊಡುಗೆ ರೂಪದಲ್ಲಿ ನಾನಾ ರೀತಿಯ ಉಡುಗೊರೆಗಳನ್ನು ಪಡೆದಿರುವ ವೈದ್ಯರಿಗೆ ಚಳಿಜ್ವರ ಬರುವಂಥ ನಡೆಯೊಂದನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಇಟ್ಟಿದೆ.
ಡೋಲೊ ಸಹಿತ ಆರು ಔಷಧ ಕಂಪನಿಗಳಿಂದ ಉಡುಗೊರೆ ಪಡೆದಿರುವ ವೈದ್ಯರ ವಿವರಗಳನ್ನು ಕೊಡುವಂತೆ ಎನ್‌ಎಂಸಿ ಆದಾಯ ತೆರಿಗೆ ಇಲಾಖೆ ಹೇಳಿದೆ.
ಡೋಲೊ ಮಾತ್ರೆಯನ್ನು ಜನಪ್ರಿಯಗೊಳಿಸಲು ಡೋಲೊ ಕಂಪನಿ ವಾಮಮಾರ್ಗ ಅನುಸರಿಸಿದ ಆರೋಪವಿದೆ. ಕೊರೊನ ಕಾಲದಲ್ಲಿ ಅದು ವೈದ್ಯರಿಗೆ 1,000 ಕೋ.ರೂ.ಗೂ ಮಿಕ್ಕಿದ ಉಡುಗೊರೆಗಳನ್ನು ನೀಡಿರುವುದನ್ನು ಆದಾಯ ಕರ ಇಲಾಖೆ ಪತ್ತೆ ಹಚ್ಚಿದೆ.
ಕೊರೊನ ಚಿಕಿತ್ಸೆಗೆ ಹೆಚ್ಚಿನ ವೈದ್ಯರು ಡೋಲೊ 650 ಮಾತ್ರೆಗಳನ್ನು ಸೂಚಿಸುತ್ತಿದ್ದರು. ಮೆಡಿಕಲ್‌ ಶಾಪ್‌ಗಳಲ್ಲಿ ಕೂಡ ಇದು ಸಿಗುತ್ತಿತ್ತು. ಬರೀ ಎರಡು ವರ್ಷದಲ್ಲಿ ಡೋಲೊ ಮಾತ್ರೆಯೊಂದರಿಂದಲೇ ಕಂಪನಿ ಸಾವಿರಾರು ಕೋ. ರೂ. ಆದಾಯ ಗಳಿಸಿದೆ. ಆದರೆ ಸಮರ್ಪಕವಾಗಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಡೋಲೊ ಮಾತ್ರೆ ತಯಾರಿಸುವ ಬೆಂಗಳೂರಿನ ಮೈಕ್ರೋ ಲ್ಯಾಬ್ಸ್‌ ಲಿಮಿಟೆಡ್‌ ಕಂಪನಿಗೆ ಸಂಬಂಧಿಸಿದ 36 ಸಂಸ್ಥಾಪನೆಗಳ ಮೇಲೆ ಜು.6ರಂದು ಆದಾಯ ಕರ ದಾಳಿಯಾಗಿತ್ತು. ಈ ದಾಳಿಯ ಸಂದರ್ಭದಲ್ಲಿ ವಶಪಡಿಸಿಕೊಂಡ ದಾಖಲೆಗಳಲ್ಲಿ ಡೋಲೊ ಮಾತ್ರೆಯನ್ನು ಜನಪ್ರಿಯಗೊಳಿಸಲು ವೈದ್ಯರಿಗೆ ಸಾವಿರಾರು ಕೋ. ರೂ.ಯ ಉಡುಗೊರೆಗಳನ್ನು ನೀಡಿರುವ ಮಾಹಿತಿ ಸಿಕ್ಕಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!