Homeಕ್ರೀಡೆಕಾಮನ್ ವೆಲ್ತ್ ಗೇಮ್ಸ್ 2022 : ಕುಸ್ತಿಯಲ್ಲಿ ಚಿನ್ನ ಗೆದ್ದ ಭಾರತ

Related Posts

ಕಾಮನ್ ವೆಲ್ತ್ ಗೇಮ್ಸ್ 2022 : ಕುಸ್ತಿಯಲ್ಲಿ ಚಿನ್ನ ಗೆದ್ದ ಭಾರತ

ಬರ್ಮಿಂಗ್ ಹ್ಯಾಮ್ : ಕಾಮನ್ ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಕುಸ್ತಿಪಟುಗಳಾದ ಭಜರಂಗ್ ಪೂನಿಯಾ, ದೀಪಕ್ ಪೂನಿಯಾ ಹಾಗೂ ಸಾಕ್ಷಿ ಮಲ್ಲಿಕ್ ಚಿನ್ನದ ಪದಕವನ್ನು ಗೆದಿದ್ದಾರೆ.
ಭಜರಂಗ್ ಪುನಿಯಾ ಪುರುಷರ 65 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಕೆನಡಾದ ಲ್ಯಾಚ್ಲನ್ ಮೆಕ್ ನೀಲ್ ವಿರುದ್ಧ ಆರಂಭದಿಂದಲೂ ಪ್ರಾಬಲ್ಯ ಸಾಧಿಸಿದ ಟೊಕಿಯೋ ಒಲಂಪಿಕ್ ಪದಕ ವಿಜೇತ ಭಜರಂಗ್ ಪೂನಿಯಾ, ಅಂತಿಮವಾಗಿ ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.
ಮೊದಲ ಸುತ್ತಿನಲ್ಲಿ ಪ್ರಥಮ ಮೂರು ಪಂದ್ಯಗಳನ್ನು ಗೆದ್ದ ಭಜರಂಗ್ ಪೂನಿಯಾ, ತನ್ನ ಪ್ರಾಬಲ್ಯವನ್ನು ಸ್ಥಾಪಿಸಲು ಯಾವುದೇ ಸಮಯವನ್ನು ಭಜರಂಗ್ ಫೂನಿಯಾ ವ್ಯರ್ಥ ಮಾಡಲಿಲ್ಲ. ಆದಾಗ್ಯೂ ಎರಡು ಕಡೆಯೂ ಪ್ರಬಲ ಹೋರಾಟ ಕಂಡುಬಂದಿತು.
ಕುಸ್ತಿಪಟು ದೀಪಕ್ ಪುನಿಯಾ ಪುರುಷರ 86 ಕೆಜಿ ವಿಭಾಗದ ಫೈನಲ್‌ನಲ್ಲಿ ಪಾಕಿಸ್ತಾನದ ಮುಹಮ್ಮದ್ ಇನಾಮ್ ಅವರನ್ನು ಸೋಲಿಸಿ ಚಿನ್ನ ಗೆದ್ದರು. ಇನ್ನೂ ಸಾಕ್ಷಿ ಮಲ್ಲಿಕ್ 62 ಕೆಜಿ ಮಹಿಳೆಯರ ವಿಭಾಗದಲ್ಲಿ ಕೆನಡಿಯನ್ ಗೊನ್ಜಾಲೆಜ್ ವಿರುದ್ಧ ಗೆದ್ದು ಬಂಗಾರದ ಪದಕ ಗೆದ್ದರು.

LEAVE A REPLY

Please enter your comment!
Please enter your name here

Latest Posts

error: Content is protected !!