HomeUncategorizedಆ. 7 : ಬೈಲೂರು ಶಿವಾಯಃ ಗೆಳೆಯರ ಬಳಗದಿಂದ ಕೆಸರ್ ದ ಗೊಬ್ಬು

Related Posts

ಆ. 7 : ಬೈಲೂರು ಶಿವಾಯಃ ಗೆಳೆಯರ ಬಳಗದಿಂದ ಕೆಸರ್ ದ ಗೊಬ್ಬು

ಕಾರ್ಕಳ : ಶಿವಾಯಃ ಗೆಳೆಯರ ಬಳಗ ಬೈಲೂರು ಪ್ರಾಯೋಜಕತ್ವದಲ್ಲಿ ಪ್ರಥಮ ಬಾರಿಗೆ ಆ. 7ರ ಭಾನುವಾರ ಬೈಲೂರು ಗರಡಿ ಬಳಿ ಬೈಲುಗದ್ದೆಯಲ್ಲಿ ಕೆಸರ್ದ ಗೊಬ್ಬು ನಡೆಯಲಿದೆ. ಬೈಲೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ನರಸಿಂಹ ತಂತ್ರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವರು. ಗುತ್ತು ಮನೆಯ ಪ್ರಶಾಂತ್‌ ಕುಮಾರ್‌ ಅಧ್ಯಕ್ಷತೆ ವಹಿಸಲಿದ್ದು, ಕಡಂಬರ ಮನೆ ಕರುಣಾಕರ ಹೆಗ್ಡೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ಬಾಲಜಿತ್ ಶೆಟ್ಟಿ, ವಕೀಲ ಸದಾನಂದ ಸಾಲಿಯಾನ್, ನೀರೆ – ಬೈಲೂರು ಲಯನ್ಸ್ ಕ್ಲಬ್‌ ಅಧ್ಯಕ್ಷ ಸುರೇಶ್ ನಾಯಕ್, ದರ್ಮೊಟ್ಟು ಜಯಪ್ರಕಾಶ್ ಶೆಟ್ಟಿ, ಬಿ. ಮನ್ಸೂರ್ ಅಹಮದ್‌, ಗುತ್ತಿಗೆದಾರ ನೆಲ್ಸನ್ ಮಚಾದೊ, ಗಿರೀಶ್‌ ಪೂಜಾರಿ, ಶಿಕ್ಷಕ ಉದಯ ಶೆಟ್ಟಿ ಹೊಸಮನೆ, ಮುನೀರ್ ಅಹಮ್ಮದ್‌, ಜಯ ಪೂಜಾರಿ ಮತ್ತು ರಮೇಶ್ ಕೆ. ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿರುವರು.

ಪಂದ್ಯಾಟದ ವಿವರ
ಕೆಸರು ಗದ್ದೆಯಲ್ಲಿ ಪುರುಷರಿಗೆ ವಾಲಿಬಾಲ್‌, ಕಬಡ್ಡಿ, ಹಗ್ಗಜಗ್ಗಾಟ ಮತ್ತು ಮಡಿಕೆ ಒಡೆಯುವ ಸ್ಪರ್ಧೆ, ಮಹಿಳೆಯರಿಗೆ ತ್ರೋಬಾಲ್, ಹಗ್ಗಜಗ್ಗಾಟ, ಸಂಗೀತ ಕುರ್ಚಿ, ಮಡಿಕೆ ಒಡೆಯುವ ಸ್ಪರ್ಧೆ, ಮಕ್ಕಳಿಗೆ 50 ಮೀಟರ್ ಓಟ, ಲಿಂಬೆ ಹಣ್ಣು ಚಮಚದ ಓಟ, ಮಡಿಕೆ ಒಡೆಯುವ ಸ್ಪರ್ಧೆ ಜರುಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Latest Posts

error: Content is protected !!