Wednesday, August 17, 2022
spot_img
Homeದೇಶಕ್ರಿಮಿನಲ್ ಕೇಸ್‌ಗಳಲ್ಲಿ ಸಂಸದರಿಗೆ ಬಂಧನದಿಂದ ವಿನಾಯಿತಿ ಇಲ್ಲ : ವೆಂಕಯ್ಯ ನಾಯ್ಡು

ಕ್ರಿಮಿನಲ್ ಕೇಸ್‌ಗಳಲ್ಲಿ ಸಂಸದರಿಗೆ ಬಂಧನದಿಂದ ವಿನಾಯಿತಿ ಇಲ್ಲ : ವೆಂಕಯ್ಯ ನಾಯ್ಡು

ನವದೆಹಲಿ : ಸಂಸತ್ ಅಧಿವೇಶನ ನಡೆಯುತ್ತಿರಲಿ ಅಥವಾ ಸಾಮಾನ್ಯ ಸಂದರ್ಭಗಳಲ್ಲೇ ಆಗಲಿ ಸಂಸದರು ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧನದಿಂದ ವಿನಾಯಿತಿ ಪಡೆಯಲು ಸಾಧ್ಯವೇ ಇಲ್ಲ ಎಂದು ರಾಜ್ಯಸಭೆ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ರಾಜ್ಯಸಭಾ ಕಲಾಪದಲ್ಲಿಯೇ ವೆಂಕಯ್ಯ ನಾಯ್ಡು ಅವರು ಸದನಕ್ಕೆ ಮಾಹಿತಿ ನೀಡಿದರು.
ಅಪರಾಧ ಪ್ರಕರಣಗಳ ವಿಚಾರದಲ್ಲಿ ಈ ದೇಶದ ಸಂಸದರೂ ಕೂಡಾ ಸಾಮಾನ್ಯ ನಾಗರಿಕನಂತೆಯೇ ಕಾನೂನು ಪಾಲನೆ ಮಾಡಬೇಕು, ಇದರಲ್ಲಿ ಯಾವುದೇ ವಿನಾಯಿತಿ ನೀಡಲು ಬರುವುದಿಲ್ಲ ಎಂದು ನಾಯ್ಡು ತಿಳಿಸಿದ್ದಾರೆ. ಅಧಿವೇಶನ ನಡೆಯುತ್ತಿರಲಿ ಅಥವಾ ಅಧಿವೇಶನ ಇಲ್ಲದ ಸಂದರ್ಭಗಳಲ್ಲೂ ಕೂಡಾ ಈ ನಿಯಮ ಅನ್ವಯ ಆಗುತ್ತದೆ ಎಂದು ವಿವರಿಸಿದ ವೆಂಕಯ್ಯ ನಾಯ್ಡು, ಕ್ರಿಮಿನಲ್ ಪ್ರಕರಣಗಳ ಬಂಧನದಿಂದ ವಿನಾಯಿತಿ ಬಯಸಿದರೆ ಸಿಗುವುದಿಲ್ಲ ಎಂದಿದ್ದಾರೆ.
ಸಂಸತ್ ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ರಾಜ್ಯಸಭೆಯ ವಿಪಕ್ಷ ನಾಯಕರಾದ ತಮಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರವಷ್ಟೇ ರಾಜ್ಯಸಭೆಯಲ್ಲಿ ವಾದಿಸಿದ್ದರು. ಖರ್ಗೆ ಅವರ ಈ ಮಾತಿಗೆ ಪ್ರತ್ಯುತ್ತರವಾಗಿ ನಾಯ್ಡು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಪ್ರತಿಕ್ರಿಯೆ ವೇಳೆ ಸಮಗ್ರವಾಗಿ ವಿವರಣೆ ನೀಡಿದ ವೆಂಕಯ್ಯ ನಾಯ್ಡು, ಕಳೆದ ಕೆಲವು ದಿನಗಳಿಂದ ಏನು ನಡೆಯುತ್ತಿದೆ ಎಂದು ನಾನು ಗಮನಿಸಿದ್ದೇನೆ. ಕೆಲವರಿಗೆ ತಪ್ಪು ಅಭಿಪ್ರಾಯ ಹಾಗೂ ಮಾಹಿತಿ ಇದೆ. ಹೀಗಾಗಿ ನಾನು ಸ್ಪಷ್ಟನೆ ನೀಡಬೇಕಿದೆ ಎಂದ ನಾಯ್ಡು, ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ತನಿಖಾ ಏಜೆನ್ಸಿಗಳು ಸಂಸದರ ವಿರುದ್ಧ ಕ್ರಮ ಕೈಗೊಳ್ಳಬಾರದು, ಏಕೆಂದರೆ ತಮಗೆ ವಿನಾಯಿತಿ ಇದೆ ಎಂಬ ಭಾವನೆಯಲ್ಲಿ ಇದ್ದಾರೆ. ಆದರೆ ಇದು ತಪ್ಪು ಎಂದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!