ಕಾಣಿಕೆ ಡಬ್ಬಿಯನ್ನೂ ಕದ್ದೊಯ್ದ ಕಳ್ಳರು
ಹೆಬ್ರಿ : ಶಿವಪುರ ಗ್ರಾಮದ ಬ್ಯಾಣ ಗದ್ದುಗೆ ಅಮ್ಮನವರ ಗುಡಿಯಿಂದ ಮೂರ್ತಿ ಮತ್ತು ಕಾಣಿಕೆ ಡಬ್ಬಿ ಕಳವಾದ ಬಗ್ಗೆ ವರದಿಯಾಗಿದೆ. ಆ. 4ರ ರಾತ್ರಿ ಪಿಕ್ಕಾಸಿನಿಂದ ಗುಡಿಯ ಬಾಗಿಲು ಒಡೆದು ಕಳ್ಳತನ ಮಾಡಲಾಗಿದೆ. ಬಳಿಕ ಕಳ್ಳರು ಖಾಲಿ ಕಾಣಿಕೆ ಡಬ್ಬಿ ಮತ್ತು ಪಿಕ್ಕಾಸನ್ನು 300 ಮೀ. ದೂರದ ಪೊದೆಗೆ ಎಸೆದು ಹೋಗಿದ್ದಾರೆ ಎಂದು ಸ್ಥಳೀಯರು ನ್ಯೂಸ್ ಕಾರ್ಕಳಕ್ಕೆ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಹೆಬ್ರಿ ಎಸ್ಐ ಸುದರ್ಶನ ದೊಡ್ಡಮನಿ ಮತ್ತವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.