Homeಸುದ್ದಿಹಿರ್ಗಾನ ಪಂಚಾಯತ್‌ ಮಾಜಿ ಅಧ್ಯಕ್ಷ ರವಿ ಪೂಜಾರಿ ನಿಧನ

Related Posts

ಹಿರ್ಗಾನ ಪಂಚಾಯತ್‌ ಮಾಜಿ ಅಧ್ಯಕ್ಷ ರವಿ ಪೂಜಾರಿ ನಿಧನ

ಕಾರ್ಕಳ : ಹಿರ್ಗಾನ ಪಂಚಾಯತ್‌ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ರವಿ ಪೂಜಾರಿ (55) ಅವರು ಆ. 4ರಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುರುವಾರ ಆಸ್ಪತ್ರೆ ದಾಖಲಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಎರಡು ಅವಧಿಗೆ ಪಂಚಾಯತ್‌ ಸದಸ್ಯರಾಗಿದ್ದ ರವಿ ಪೂಜಾರಿ 2005ರಿಂದ 2007ರ ಅವಧಿಗೆ ಪಂಚಾಯತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ವೃತ್ತಿಯಲ್ಲಿ ಫೋಟೋಗ್ರಾಫರ್‌ ಆಗಿದ್ದ ರವಿ ಅವರು ವಿವಿಧ ಸಂಘ- ಸಂಸ್ಥೆ‌, ಧಾರ್ಮಿಕ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದು ಮಾಹಿಂದಾಲ ಗರಡಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here

Latest Posts

error: Content is protected !!