Friday, August 19, 2022
spot_img
Homeಸುದ್ದಿಪ್ರವೀಣ್‌ ಹತ್ಯೆ: ಎನ್‌ಐಎಗೆ ಹಸ್ತಾಂತರ ವಿಳಂಬದಿಂದ ತನಿಖೆ ಹಿನ್ನಡೆ?

ಪ್ರವೀಣ್‌ ಹತ್ಯೆ: ಎನ್‌ಐಎಗೆ ಹಸ್ತಾಂತರ ವಿಳಂಬದಿಂದ ತನಿಖೆ ಹಿನ್ನಡೆ?

ಹಿಟ್‌ಸ್ಕ್ವಾಡ್‌ ಕೃತ್ಯ ಎಂದು ಪೊಲೀಸರ ಹೇಳಿಕೆ

ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆಯಾಗಿ ಹತ್ತು ದಿನಗಳಾದರೂ ಮುಖ್ಯ ಆರೋಪಿಗಳು ಇನ್ನೂ ಸೆರೆಯಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪೊಲೀಸರು ತೀವ್ರವಾಗಿ ತನಿಖೆ ಕೈಗೊಂಡಿದ್ದರೂ ಆರೋಪಿಗಳು ಕೈಗೆ ಸಿಗದೆ ನುಣುಚಿಕೊಳ್ಳುತ್ತಿದ್ದಾರೆ. ಈ ನಡುವೆ ಪ್ರವೀಣ್‌ ನೆಟ್ಟಾರು ಹತ್ಯಾ ಪ್ರಕರಣ ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ಏಜೆನ್ಸಿ ನಡುವೆ ಪ್ರತಿಷ್ಠೆಯ ವಿಚಾರವಾಗಿ ಮಾರ್ಪಟ್ಟಿದೆಯೇ ಎಂಬ ಅನುಮಾನ ಕಾಡುತ್ತಿದೆ.
ಜನಾಕ್ರೋಶಕ್ಕೆ ಮಣಿದು ಈ ಪ್ರಕರಣವನ್ನು ಸರಕಾರ ಎನ್‌ಐಎಗೆ ಒಪ್ಪಿಸಿದೆ. ಎನ್‌ಐಎ ಬೆಳ್ಳಾರೆಗೆ ಹೋಗಿ ಒಂದು ಸುತ್ತಿನ ತನಿಖೆಯನ್ನೂ ಮಾಡಿದೆ. ಆದರೆ ಅಧಿಕೃತವಾಗಿ ತನಿಖೆಯನ್ನು ಇನ್ನೂ ಎನ್‌ಐಎಗೆ ಒಪ್ಪಿಸಿಲ್ಲ. ಈ ಕಾರಣಕ್ಕೆ ಆರೋಪಿಗಳ ಬಂಧನ ವಿಳಂಬವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಸ್ವತಹ ಎಡಿಜಿಪಿ ಅಲೋಕ್‌ಕುಮಾರ್‌ ಮಂಗಳೂರಿನಲ್ಲಿ ಠಿಕಾಣಿ ಹೂಡಿ ತನಿಖೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರೂ ತನಿಖೆಯಲ್ಲಿ ಹೇಳಿಕೊಳ್ಳುವಂಥ ಪ್ರಗತಿಯಾಗಿಲ್ಲ. ಆರೋಪಿಗಳನ್ನು ಗುರುತಿಸಿದ್ದೇವೆ, ಸಂಚನ್ನು ಪತ್ತೆ ಹಚ್ಚಿದ್ದೇವೆ ಎಂದು ಎಡಿಜಿಪಿ ಹೇಳುತ್ತಿದ್ದಾರೆ. ಆದರೆ ಆರೋಪಿಗಳ ಬಂಧನವಾಗದಿರುವುದು ಮತ್ತೆ ಜನರ ಅಸಹನೆಗೆ ಕಾರಣವಾಗುತ್ತಿದೆ.
ಹಿಟ್‌ ಸ್ಕ್ವಾಡ್‌ ಕೃತ್ಯ
ಪ್ರವೀಣ್‌ ನೆಟ್ಟಾರು ಹತ್ಯೆಯ ಹಿಂದೆ ಹಿಟ್‌ ಸ್ಕ್ವಾಡ್‌ ಇದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಇದು ಯೋಜಿತ ಕೃತ್ಯ. ಬಹಳಷ್ಟು ಸಿದ್ಧತೆ ಮಾಡಿಕೊಂಡು ಹತ್ಯೆ ಮಾಡಲಾಗಿದೆ ಹಾಗೂ ಇದಕ್ಕಾಗಿ ಹಿಟ್‌ ಸ್ಕ್ವಾಡ್‌ ರಚಿಸಲಾಗಿತ್ತು.ಇದರಲ್ಲಿದ್ದವರನ್ನು ಮತ್ತು ಸಂಚು ರೂಪಿಸಿದ ಸ್ಥಳವನ್ನು ಗುರುತಿಸಿದ್ದೇವೆ ಎಂದು ಎಡಿಜಿಪಿ ಹೇಳಿದ್ದಾರೆ.
ಆರೋಪಿಗಳು ಹಿಡಿಯದೆ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಿದರೆ ಎಲ್ಲ ಕ್ರೆಡಿಟ್‌ ಎನ್‌ಐಎ ತೆಗೆದುಕೊಳ್ಳಬಹುದು ಎಂದು ಪೊಲೀಸರು ಹಸ್ತಾಂತರ ವಿಳಂಬಿಸುತ್ತಾರೆಯೇ ಎಂಬ ಅನುಮಾನವಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!