Homeಸುದ್ದಿಆ. 8ರಂದು ಕಾರ್ಮಿಕರ ನೋಂದಣಿ ಶಿಬಿರ

Related Posts

ಆ. 8ರಂದು ಕಾರ್ಮಿಕರ ನೋಂದಣಿ ಶಿಬಿರ

ಕಾರ್ಕಳ : ದುರ್ಗ ಗ್ರಾಮ ಪಂಚಾಯತ್‌ನಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ನೋಂದಣಿ ಮತ್ತು ನವೀಕರಣ ಶಿಬಿರ ಹಾಗೂ ವಿವಿಧ ಯೋಜನೆಗಳ ಅರ್ಜಿ ಸ್ವೀಕಾರ ಕಾರ್ಯಕ್ರಮ ಆ. 8ರಂದು ಬೆಳಗ್ಗೆ 10.30ರಿಂದ ನಡೆಯಲಿದೆ.
ಪಂಚಾಯತ್ ಸಭಾಂಗಣದಲ್ಲಿ ದುರ್ಗ ಗ್ರಾಮ ಪಂಚಾಯತ್, ಜಲದುರ್ಗ ಡಿಜಿಟಲ್ ಸೇವಾ ಕೇಂದ್ರ, ಹಸಿರೆ ಉಸಿರು ಪರಿಸರ ಸಂಘಟನೆ ಹಾಗೂ ತೋಟಗಾರಿಕೆ ಇಲಾಖೆ ಇವರುಗಳ ಸಹಯೋಗದಲ್ಲಿ ವಿವಿಧ ಯೋಜನೆಗಳ ಅರ್ಜಿ ಸ್ವೀಕಾರ ಹಾಗೂ ನೋಂದಣಿ ಶಿಬಿರ ನಡೆಯಲಿದೆ. ಈ ಕೆಳಗಿನ ನೋಂದಣಿಗಳನ್ನು ಮಾಡಿಕೊಳ್ಳಲಾಗುವುದು

  1. ದುರ್ಗ ಗ್ರಾಮದ ಕಟ್ಟಡ ನಿರ್ಮಾಣ ಕಾರ್ಮಿಕರ ಗುರುತಿನ ಚೀಟಿಯ ನೋಂದಣಿ ಹಾಗೂ ನವೀಕರಣ.
  2. ಸರಕಾರವು ಘೋಷಣೆ ಮಾಡಿರುವಂತೆ ಪ. ಜಾತಿ ಮತ್ತು ಪ. ಪಂಗಡಗಳ ಗ್ರಾಹಕರಿಗೆ 75 ಯೂನಿಟ್ ಉಚಿತ ವಿದ್ಯುತ್ ಸೌಲಭ್ಯವನ್ನು ಪಡೆಯುವ ಅರ್ಜಿ ಸ್ವೀಕಾರ.
  3. ತೆಂಗು ಮತ್ತು ಅಡಿಕೆ ಮರ ಹತ್ತುವ ವೃತ್ತಿ ನಿರ್ವಹಿಸುವ ಕೃಷಿಕರಿಗೆ ಈ ವೃತ್ತಿ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಅಪಘಾತವಾದಲ್ಲಿ ನಾಮ ನಿರ್ದೇಶಿತರು ವಿಮೆ ಸೌಲಭ್ಯ ಪಡೆಯಲು ವಿಮೆ ಸೌಲಭ್ಯದ ಅರ್ಜಿ ಸ್ವೀಕಾರ. ಇದರ ಪ್ರಯೋಜನವನ್ನು ಗ್ರಾಮಸ್ಥರು ಪಡೆದುಕೊಳ್ಳುವಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Latest Posts

error: Content is protected !!