ಕಾರ್ಕಳ : ತಾಲೂಕಿನಾದ್ಯಂತ ಶ್ರಾವಣ ಶುಕ್ರವಾರದಂದು ಶ್ರೀ ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಧಾರಾಕಾರ ಮಳೆಯ ನಡುವೆಯೂ ಭಕ್ತರು ಉತ್ಸಾಹದಿಂದಲೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ನಿನ್ನೆ ಸಂಜೆ ವೇಳೆ ಸುರಿಯುತ್ತಿದ್ದ ಮಳೆ ಲೆಕ್ಕಿಸದೆಯೇ ಜನತೆ ಹೂವು-ಹಣ್ಣು, ತರಕಾರಿ, ದಿನಸಿ ಸಾಮಾನುಗಳನ್ನು ಖರೀದಿಯಲ್ಲಿ ನಿರತರಾಗಿದ್ದರು.
ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಾಬೆಟ್ಟು ಶ್ರೀ ವೇಣುಗೋಪಾಲ ದೇವಸ್ಥಾನ, ಶ್ರೀ ರಾಮ ಮಂದಿರ, ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನ, ಮುಡ್ರಾಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಆನೆಕೆರೆ ಶ್ರೀಕೃಷ್ಣ ಕ್ಷೇತ್ರ, ಅನಂತಶಯನ ಶ್ರೀ ವೇಣುಗೋಪಾಲ ದೇವಸ್ಥಾನ, ಹೆಬ್ರಿ ಅಮೃತಭಾರತಿ ಮಾತೃ ಮಂಡಳಿ, ಬಿಜೆಪಿ ಕಚೇರಿಯಲ್ಲಿ ಮಹಿಳಾ ಮೋರ್ಚಾ ನಗರ ಶಕ್ತಿಕೇಂದ್ರದ ವತಿಯಿಂದ ಮತ್ತು ಭಾರತಿ ಸೇವಾ ಸಮಿತಿ, ಸಂಸ್ಕೃತಿ ಪ್ರಸಾರ ಸಮಿತಿ ಹಾಗೂ ಸಾಂದೀಪನಿ ವಿದ್ಯಾ ಕೇಂದ್ರದಲ್ಲಿ ಸಾಮೂಹಿಕ ಶ್ರೀ ವರ ಮಹಾಲಕ್ಷ್ಮಿ ಪೂಜೆ ನಡೆಯಿತು.
ಅಂಡಾರು, ಚಾರ, ವರಂಗ, ಮಾಳ,ಪಳ್ಳಿ, ನೀರೆ ಬೈಲೂರು, ಕಡ್ತಲ, ನಲ್ಲೂರು, ಮುಡಾರು ಬಜಗೋಳಿ ಉಭಯ ತಾಲೂಕಿನ ಹಲವೆಡೆ ಶ್ರೀ ವರಮಹಾಲಕ್ಷ್ಮೀ ಪೂಜೆಯು ಬಹಳ ಸಂಭ್ರಮದಿಂದ ಆಚರಿಸಲಾಯಿತು.