ಕಾರ್ಕಳ : ಪಶುವೈದ್ಯಕೀಯ ಇಲಾಖೆಯಲ್ಲಿ ಹಿರಿಯ ಪಶುವೈದ್ಯ ಪರಿವೀಕ್ಷಕರಾಗಿದ್ದ ಮುದ್ರಾಡಿ ಗ್ರಾಮದ ಶೇಖರ ನಾಯ್ಕ ಶುಕ್ರವಾರ (59) ಹೃದಯಾಘಾತದಿಂದ ನಿಧನರಾಗಿದ್ದಾರೆ. ವರಂಗ ಗ್ರಾಮದಲ್ಲಿ ದನದ ಚಿಕಿತ್ಸೆಗೆ ತೆರಳಿದ್ದ ಸಂದರ್ಭದಲ್ಲಿ ಹಠಾತ್ ಎದೆನೋವು ಕಾಣಿಸಿಕೊಂಡು ಶೇಖರ್ ಅವರು ಸ್ಥಳದಲ್ಲೇ ಕುಸಿದುಬಿದ್ದರು. ಆಸ್ಪತ್ರೆ ಸಾಗಿಸುವ ವೇಳೆ ದಾರಿಮಧ್ಯೆ ಅವರು ಕೊನೆಯುಸಿರೆಳೆದರು. ಶೇಖರ ನಾಯ್ಕ ಅವರು ಕಾರ್ಕಳ ತಾಲೂಕಿನ ಮರಾಠಿ ಸಮಾಜ ಸಂಘದ ಗೌರವಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರನ್ನುಅಗಲಿದ್ದಾರೆ.
Recent Comments
ಕಗ್ಗದ ಸಂದೇಶ
on