ಕಾರ್ಕಳ : ಶುಕ್ರವಾರವೂ ಕಾರ್ಕಳ ಹೆಬ್ರಿ ತಾಲೂಕಿನಾದ್ಯಂತ ಮಳೆ ಮುಂದುವರಿದಿದೆ. ಬುಧವಾರ, ಗುರುವಾರ ಸಾಧಾರಣ ಮಳೆಯಾಗಿದ್ದಲ್ಲಿ ಶುಕ್ರವಾರ ತಾಲೂಕಿನಾದ್ಯಂತ ಭಾರಿ ಮಳೆಯಾಗಿದೆ. ಕಾರ್ಕಳ 85.4 ಮಿ.ಮೀ., ಅಜೆಕಾರು 43.8 ಮಿ.ಮೀ., ಸಾಣೂರು 96.8 ಮಿ.ಮೀ., ಕೆದಿಂಜೆ 97.4, ಮುಳಿಕ್ಕಾರು 187.0 ಮಿ.ಮೀ., ಕೆರ್ವಾಶೆ : 120.0 ಮಿ.ಮೀ., ಮಳೆಯಾಗಿದ್ದು, ಸರಾಸರಿ 90. 5 ಪ್ರಮಾಣದಲ್ಲಿ ಮಳೆ ಸುರಿದಿದೆ.
ಹಾನಿ
ಗುರುವಾರ ಬೀಸಿದ ಭಾರಿ ಗಾಳಿ ಮಳೆಗೆ ಮರ್ಣೆ ಗ್ರಾಮದ ಮಂಗಳ ನಗರ ನಿವಾಸಿ ಸಾಧು ದೇವಾಡಿಗ ಎಂಬವರ ಮನೆ ಭಾಗಶಃ ಹಾನಿಗೀಡಾಗಿದೆ. ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ ಬೈಲೂರು ಗ್ರಾಮದ ಸುಂದರಿ ಮೆಣ್ಪ ಮುಗ್ಗೆರ ಎಂಬವರ ಮನೆಗೆ ಮರ ಬಿದ್ದು ಅಂದಾಜು ರೂ. 50 ಸಾವಿರ ನಷ್ಟವುಂಟಾಗಿದೆ.