Friday, August 19, 2022
spot_img
Homeಸ್ಥಳೀಯ ಸುದ್ದಿಕಾಂತಾವರ ಗ್ರಾ. ಪಂ. ಗ್ರಾಮ ಸಭೆ

ಕಾಂತಾವರ ಗ್ರಾ. ಪಂ. ಗ್ರಾಮ ಸಭೆ

ಕಾಂತಾವರ : ಗ್ರಾ. ಪಂ. ನ 2022-23 ನೇ ಸಾಲಿನ ಗ್ರಾಮ ಸಭೆಯು ಕಾಂತಾವರ ಕನ್ನಡ ಸಂಘದಲ್ಲಿ ಇತ್ತೀಚೆಗೆ ಜರುಗಿತು. ಗ್ರಾ. ಪಂ. ಅಧ್ಯಕ್ಷೆ ವನಿತಾ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರು ಪಂಚಾಯತ್ ಜೊತೆಗೆ ಸಹಕರಿಸುವಂತೆ ಕರೆ ನೀಡಿದರು. ಸಭೆಯಲ್ಲಿ ಆರೋಗ್ಯ ಇಲಾಖೆ, ಕೃಷಿ ಜಲಾನಯನ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಆಯುಷ್ ವೈದ್ಯಾಧಿಕಾರಿ, ಮೆಸ್ಕಾಂ ಇಲಾಖೆ, ಪಶು ಸಂಗೋಪನಾ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದು, ಇಲಾಖಾ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಸಮಾಜ ಕಲ್ಯಾಣಾಧಿಕಾರಿ ರೋಷನ್ ಕುಮಾರ್ ಹಾಜರಿದ್ದು ಇಲಾಖಾ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಹಾಯಧನ ಚೆಕ್ ವಿತರಣೆ ಮಾಡಲಾಯಿತು. ಗ್ರಾ. ಪಂ. ಪಂ.ಅಭಿವೃದ್ಧಿ ಅಧಿಕಾರಿ ಸದಾಶಿವ ಮೂಲ್ಯ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಜಯಕರ ಜಮಾ ಖರ್ಚುಗಳ ವಿವರಣೆ ನೀಡಿದರು. ಪಂಚಾಯತ್ ಸಿಬ್ಬಂದಿ ಮಂಜುನಾಥ ಕಿರು ವರದಿಯನ್ನು ಸಭೆಗೆ ಮಂಡಿಸಿದರು. ಸಭೆಯ ಕೊನೆಯಲ್ಲಿ ಸದಸ್ಯೆ ಅಮಿತಾ ಕೆ. ಪೂಜಾರಿ ವಂದಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ನ ಉಪಾಧ್ಯಕ್ಷ, ಗೌರವಾನ್ವಿತ ಸದಸ್ಯರು, ಶಾಲಾ ಶಿಕ್ಷಕರು, ಸಮುದಾಯ ಆರೋಗ್ಯಾಧಿಕಾರಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು, ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!