Friday, August 19, 2022
spot_img
Homeಸುದ್ದಿಆ.15ರಂದು ದೇಶದಲ್ಲಿ 5ಜಿ ಇಂಟರ್‌ನೆಟ್‌ ಸೇವೆ ಆರಂಭ?

ಆ.15ರಂದು ದೇಶದಲ್ಲಿ 5ಜಿ ಇಂಟರ್‌ನೆಟ್‌ ಸೇವೆ ಆರಂಭ?

ಹೊಸದಿಲ್ಲಿ: ಇಂಟರ್‌ನೆಟ್‌ ಬಳಕೆದಾರರಿಗೊಂದು ಸಿಹಿ ಸುದ್ದಿ. ಆ.15ರಂದು ದೇಶದಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳ 5ಜಿ ಇಂಟರ್‌ನೆಟ್‌ ಸೇವೆ ಆರಂಭವಾಗಲಿದೆ.
ಜಿಯೊ, ಏರ್‌ಟೆಲ್, ವಿಐ ಮತ್ತು ಅದಾನಿ ಕಂಪನಿಗಳು ಆ.10 ರಂದು 5G ಸ್ಪೆಕ್ಟ್ರಮ್ ಪಡೆದುಕೊಳ್ಳುತ್ತಿರುವುದು ಖಚಿತವಾಗಿದೆ. ಆಗಸ್ಟ್‌ 15ರಂದು ಜಿಯೊ ಮತ್ತು ಏರ್‌ಟೆಲ್ ಕಂಪೆನಿಗಳು ದೇಶಾದ್ಯಂತ 5ಜಿ ಸೇವೆ ಆರಂಭಿಸುವ ನಿರೀಕ್ಷೆ ಇದೆ.
ದೇಶ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಿಸುತ್ತಿರುವ ಶುಭ ದಿನದಂದೇ ಜನರಿಗೆ 5ಜಿ ಕೊಡುಗೆ ನೀಡಲು ಜಿಯೊ ಮತ್ತು ಏರ್‌ಟೆಲ್‌ ಕಂಪನಿ ಉತ್ಸುಕವಾಗಿದೆ. ಎಲ್ಲ ರೀತಿಯಿದಲೂ 5ಜಿ ಸೇವೆ ಆರಂಭಿಸಲು ಇದ್ದಕ್ಕಿಂತ ಉತ್ತಮ ದಿನವಿಲ್ಲ ಎಂದು ಜಿಯೊ ಹಾಗೂ ಏರ್‌ಟೆಲ್ ಕಂಪನಿಗಳು ನಿರ್ಧಾರ ಮಾಡಿವೆ ಎಂದು ಟೆಲಿಕಾಂ ಉದ್ಯಮ ಮೂಲಗಳು ತಿಳಿಸಿವೆ.
ಸ್ವಾತಂತ್ರ್ಯದ ಅಮೃತಮಹೋತ್ಸವದಂಗವಾಗಿ ಜನರಿಗೆ ಉತ್ತಮವಾದ ಉಡುಗೊರೆಯೊಂದನ್ನು ನೀಡಲು ಕೇಂದ್ರ ಸರಕಾರ ಕೂಡ ತೀರ್ಮಾನಿಸಿದೆ. ಈ ನಿಟ್ಟಿನಲ್ಲಕಿ ಆ.15 ರಂದು 5ಜಿ ಸೇವೆ ಆರಂಭವಾಗಬೇಕು ಎಂಬ ದೃಷ್ಟಿಯಲ್ಲೇ ಟೆಲಿಕಾಂ ಇಲಾಖೆ ಆಗಸ್ಟ್ 10 ರಂದು 5ಜಿ ಸ್ಪೆಕ್ಟ್ರಮ್‌ ಹಂಚಿಕೆಯನ್ನು ಮಾಡುತ್ತಿದೆ. ಆಗಸ್ಟ್ 10ರಂದು 5ಜಿ ಸ್ಪೆಕ್ಟ್ರಮ್ ಹಂಚಿಕೆ ಮಾಡುತ್ತಿರುವ ಬಗ್ಗೆ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಅವರು ಖಚಿತಪಡಿಸಿದ್ದಾರೆ. ದೇಶದ ಸ್ವಾತಂತ್ಯ ದಿನ ಆಗಸ್ಟ್‌ 15ನೇ ತಾರೀಕು 5ಜಿ ಸೇವೆಯ ಹೆಗ್ಗುರುತಾಗುವುದು ಬಹುತೇಕ ಖಚಿತ. 5ಜಿ ದರ ಜನಸಾಮಾನ್ಯರ ಕೈಗೆಟುಕುವಂತಿರುತ್ತದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!