Friday, August 19, 2022
spot_img
Homeಸುದ್ದಿಗೋಶಾಲೆಯಲ್ಲಿ 50 ಹಸುಗಳು ನಿಗೂಢ ಸಾವು

ಗೋಶಾಲೆಯಲ್ಲಿ 50 ಹಸುಗಳು ನಿಗೂಢ ಸಾವು


ಅಮ್ರೋಹ: ಉತ್ತರ ಪ್ರದೇಶದ ಅಮ್ರೋಹ ಎಂಬಲ್ಲಿರುವ ಗೋಶಾಲೆಯೊಂದರಲ್ಲಿ 50ಕ್ಕೂ ಅಧಿಕ ಜಾನುವಾರುಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದ್ದು, ಈ ಕುರಿತು ತನಿಖೆ ನಡೆಸಲು ಸರಕಾರ ಆದೇಶಿಸಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಸೂಚನೆಯಂತೆ ಪಶಯ ಸಂಗೋಪನೆ ಸಚಿವ ಧರಂ ಪಾಲ್‌ ಸಿಂಗ್‌ ಅಮ್ರೋಹಕ್ಕೆ ತೆರಳಿದ್ದಾರೆ.
ಗುರುವಾರ ಸಂಜೆ ಮೇವು ತಿಂದ ಬಳಿಕ ಹಸುಗಳು ಒಂದೊಂದಾಗಿ ಅಸ್ವಸ್ಥಗೊಂಡು ಸಾವಿಗೀಡಾಗಿವೆ. ತಾಹಿರ್‌ ಎಂಬ ವ್ಯಕ್ತಿ ಗೋಶಾಲೆಗೆ ಮೇವು ಪೂರೈಸಿದ್ದು, ಅವನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಹಲವಾರು ಹಸುಗಳು ಅಸ್ವಸ್ಥಗೊಂಡು ಚಿಂತಾಜನಕ ಸ್ಥಿತಿಯಲ್ಲಿವೆ. ಈ ಘಟನೆಯಲ್ಲೆ ತಪ್ಪಿತಸ್ಥರು ಯಾರೇ ಆಗಿದ್ದರೂ ಬಿಡುವುದಿಲ್ಲ ಎಂದು ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!