Homeರಾಜ್ಯಎಲೆಕ್ಷನ್ ಹಿಂದು ರಾಹುಲ್ ಗಾಂಧಿ 2023ರ ಚುನಾವಣೆಗೆ ರೆಡಿ

Related Posts

ಎಲೆಕ್ಷನ್ ಹಿಂದು ರಾಹುಲ್ ಗಾಂಧಿ 2023ರ ಚುನಾವಣೆಗೆ ರೆಡಿ

ಬೆಂಗಳೂರು : ಸಿದ್ದರಾಮೋತ್ಸವಕ್ಕೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಿತ್ರದುರ್ಗದ ಮುರುಘಾ ಮಠದಲ್ಲಿ ಲಿಂಗ ದೀಕ್ಷೆ ಸ್ವೀಕರಿಸಿರುವುದನ್ನು ಬಿಜೆಪಿ ಲೇವಡಿ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತಿತರ ನಾಯಕರೊಂದಿಗೆ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿದ ರಾಹುಲ್‌ ಗಾಂಧಿ ಮುರುಘಾ ಶ್ರೀಗಳಿಂದ ಲಿಂಗ ಧೀಕ್ಷೆ ಸ್ವೀಕರಿಸಿದ್ದರು. ಈ ವೀಡಿಯೊವನ್ನು ಹಂಚಿಕೊಂಡಿರುವ ಬಿಜೆಪಿ ಸರಣಿ ಟ್ವೀಟ್ ಮೂಲಕ ಎಲೆಕ್ಷನ್ ಹಿಂದು ರಾಹುಲ್ ಗಾಂಧಿ 2023ರ ವಿಧಾನಸಭೆ ಚುನಾವಣೆಗೆ ತಯಾರಾಗುತ್ತಿದ್ದಾರೆ ಎಂದು ಟೀಕಿಸಿದೆ. ಕರ್ನಾಟಕದ ಮೂರು ಜನರು ಹತ್ಯೆಗೀಡಾಗಿದ್ದಾರೆ. ಕಳೆದೆರೆಡು ದಿನಗಳಲ್ಲಿ 11 ಸಾವು ಸಂಭವಿಸಿದೆ. ಕಾಂಗ್ರೆಸ್ ಕಾರ್ಯಕರ್ತ ಅಪಘಾತದಲ್ಲಿ ಮೃತ್ಯು. ಕಾಂಗ್ರೆಸ್ಸಿಗರೇ, ಸೂತಕದ ಮನೆಯಲ್ಲಿ ಸಂಭ್ರಮದ ವಾತಾವರಣ ಎಷ್ಟು ಸರಿ? ನಾಡಿನಾದ್ಯಂತ ಕಂಡು ಕೇಳರಿಯದ ಮಳೆಯಾಗಿ ಅಪಾರ ಸಾವುನೋವುಗಳುಂಟಾಗಿದೆ. ಈ ಸಂದರ್ಭದಲ್ಲೂ ಕಾಂಗ್ರೆಸ್‌ ಪಕ್ಷವೇ ಮುಂದೆ ನಿಂತು ಅದ್ದೂರಿ ಹುಟ್ಟುಹಬ್ಬ ಆಚರಣೆ ಮಾಡುತ್ತಿರುವುದು ರಾಜ್ಯದ ಜನತೆಯ ಕಣ್ಣೀರಿಗೆ ಮಾಡುತ್ತಿರುವ ಅವಮಾನ ಎಂದು ಆರೋಪಿಸಿದೆ. ಒಬ್ಬ ಕಾರ್ಯಕರ್ತನನ್ನು ಕಳೆದುಕೊಂಡೆವು ಎಂಬ ಕಾರಣಕ್ಕೆ ನಾವು ಜನೋತ್ಸವ ಕಾರ್ಯಕ್ರಮವನ್ನೇ ರದ್ದು ಮಾಡಿದ್ದೇವೆ. ಆದರೆ ಅಮೃತ ಮಹೋತ್ಸವಕ್ಕೆ ಆಗಮಿಸುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತ ಅಪಘಾತದಲ್ಲಿ ಮೃತಪಟ್ಟಾಗಲೂ ಕಾಂಗ್ರೆಸ್‌ ಕೇಕ್‌ ಕತ್ತರಿಸಿಕೊಂಡು ಸಂಭ್ರಮಿಸುತ್ತಿದೆ. ಕಾರ್ಯಕರ್ತನ ಸಾವಿಗೂ ಇಲ್ಲಿ ಬೆಲೆಯಿಲ್ಲ. ಜನವಿರೋಧಿ ಕಾಂಗ್ರೆಸ್ ಎಂದೆಲ್ಲ ಬಿಜೆಪಿ ಟೀಕೆಗಳ ಸುರಿಮಳೆ ಸುರಿಸಿದೆ. 75 ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು. ನಕಲಿ ಗಾಂಧಿ ಕುಟುಂಬ ಹೊರತುಪಡಿಸಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ಸಿಗರಿಂದ ಬೇರೊಬ್ಬ ವ್ಯಕ್ತಿಯ ವ್ಯಕ್ತಿಪೂಜೆ ನಡೆಸುವಂತೆ ಮಾಡಿದ ಸಿದ್ದರಾಮಯ್ಯ ಅವರ ಹಠಕ್ಕೂ ಅಭಿನಂದನೆಗಳು ಎಂದು ಬಿಜೆಪಿ ಟೀಕಿಸಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!