ಯುರೋಪ್ : ಶ್ರೀಲಂಕ ಮತ್ತು ಪಾಕಿಸ್ಥಾನದ ಬಳಿಕ ಈಗ ಐರೋಪ್ಯ ಒಕ್ಕೂಟದ ಹಲವು ರಾಷ್ಟ್ರಗಳು ತೀವ್ರ ಇಂಧನ ಕೊರತೆ ಎದುರಿಸುತ್ತಿದ್ದು, ಕೆಲವು ದೇಶಗಳಿಗೆ ಕಗ್ಗತ್ತಲಲ್ಲಿ ಮುಳುಗುವ ಭೀತಿ ಎದುರಾಗಿದೆ. ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮವಾಗಿ ರಷ್ಯಾದಿಂದ ಗ್ಯಾಸ್ ಪೂರೈಕೆ ತಡೆದಿರುವುದೇ ಯುರೋಪ್ನ ಇಂಧನ ಕೊರತೆಗೆ ಕಾರಣ ಎನ್ನಲಾಗುತ್ತಿದೆ. ಚಳಿಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಕೊರತೆ ಎದುರಾಗಿರುವುದು ಯುರೋಪ್ ಜನತೆ ಮತ್ತು ಸರಕಾರಗಳನ್ನು ಚಿಂತೆಗೀಡು ಮಾಡಿದೆ. ಯುರೋಪಿನಾದ್ಯಂತ ಚಳಿಗಾಲದಲ್ಲಿ ತೀವ್ರ ಚಳಿ ಇರುತ್ತದೆ. ಇಂಥ ಸಂದರ್ಭದಲ್ಲಿ ಅಲ್ಲಿ ಹೀಟರ್ ಅನಿವಾರ್ಯ. ಯುರೋಪ್ ಒಕ್ಕೂಟದ ಪ್ರಮುಖ ರಾಷ್ಟ್ರವಾಗಿರವ ಜರ್ಮನಿ ಕಳೆದ ವಾರವೇ ಇಂಧನ ಉಳಿತಾಯದ ಕ್ರಮಗಳನ್ನು ಪ್ರಕಟಿಸಿದೆ. ಇದರಂಗವಾಗಿ ಸ್ಮಾರಕಗಳ ದೀಪಗಳನ್ನು ಉರಿಸುತ್ತಿಲ್ಲ ಹಾಗೂ ಸರಕಾರಿ ಕಟ್ಟಡಗಳಲ್ಲಿ ಕಟ್ಟುನಿಟ್ಟಿನ ಮಿತ ಇಂಧನ ವ್ಯಯ ನೀತಿಯನ್ನು ಜಾರಿಗೆ ತಂದಿದೆ.
ಚಳಿಗಾಲದಲ್ಲಿ ಗ್ಯಾಸ್ ಖಾಲಿಯಾಗಿ ಕಗ್ಗತ್ತಲಿಗೆ ಜಾರುವುದನ್ನು ತಡೆಯಲು ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಸಿದ್ಧತೆಯಲ್ಲಿ ತೊಡಗಿವೆ. ಇಂಧನ ಬೇಡಿಕೆಯನ್ನು ಕನಿಷ್ಠ ಶೆ.15ರಷ್ಟಾದರೂ ತಗ್ಗಿಸಲೇ ಬೇಕಾದ ಅನಿವಾರ್ಯತೆ ಈ ದೇಶಗಳಿಗೆ ಎದುರಾಗಿದೆ. ಸದ್ಯಕ್ಕೆ ವಿದ್ಯುತ್ ಮಿತ ಬಳಕೆ ಐಚ್ಚಿಕವಾಗಿದ್ದರೂ ಅನಿವಾರ್ಯ ಪರಿಸ್ಥಿತಿ ಎದುರಾದರೆ ಕಡ್ಡಾಯಗೊಳಿಸುವ ಕುರಿತು ಚಿಂತನೆ ನಡೆದಿದೆ. ಇತ್ತೀಚೆಗೆ ನಡೆದ ಐರೋಪ್ಯ ಒಕ್ಕೂಟದ ಸಭೆಯಲ್ಲಿ ಹಂಗೇರಿ ಹೊರತುಪಡಿಸಿ ಉಳಿದ ದೇಶಗಳು ಮಿತವ್ಯಯದ ಕ್ರಮಗಳಿಗೆ ಒಪ್ಪಿಕೊಂಡಿವೆ. ಫ್ರಾನ್ಸ್, ಜರ್ಮನಿ, ಇಟಲಿ, ಗ್ರೀಸ್, ಸ್ಪೈನ್ ಸೇರಿ 17 ದೇಶಗಳು ಐರೋಪ್ಯ ಒಕ್ಕೂಟದಲ್ಲಿವೆ.
ಕಗ್ಗತ್ತಲಲ್ಲಿ ಮುಳುಗುವ ಭೀತಿಯಲ್ಲಿ ಯುರೋಪ್ ದೇಶಗಳು
Recent Comments
ಕಗ್ಗದ ಸಂದೇಶ
on