ಕಾರ್ಕಳದಲ್ಲಿ ಹೆಚ್ಚಿದ ಮಾರಾಟ
ಕಾರ್ಕಳ : ಬೆಳ್ಳಾರೆ ಪ್ರವೀಣ್ ನೆಟ್ಟಾರು ಹಾಗೂ ಸುರತ್ಕಲ್ನಲ್ಲಿ ನಡೆದ ಫಾಝಿಲ್ ಹತ್ಯೆ ಬಳಿಕ ದ.ಕ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ದ.ಕ. ಜಿಲ್ಲಾಡಳಿತ ಆ. 5ರವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿರುವ ಪರಿಣಾಮ ಮೂಡಬಿದ್ರೆ ಭಾಗದ ಜನತೆ ಕಾರ್ಕಳಕ್ಕೆ ಬಂದು ಮದ್ಯ ಸೇವಿಸುತ್ತಿದ್ದಾರೆ. ಮೂಡಬಿದ್ರೆ ದ.ಕ. ಜಿಲ್ಲೆಗೆ ಸೇರಿರುವುದರಿಂದ ಅಲ್ಲಿನ ಅನೇಕರು ಕಾರ್ಕಳದ ಬಾರ್, ವೈನ್ ಶಾಪ್ಗೆ ಬಂದು ಮದ್ಯ ಪಡೆಯುತ್ತಿದ್ದಾರೆ. ಹೀಗಾಗಿ ಕಾರ್ಕಳದ ಬಾರ್, ವೈನ್ ಶಾಪ್ಗಳಲ್ಲಿ ಹೆಚ್ಚಿನ ಜನಸಂದಣಿ ಕಂಡುಬರುತ್ತಿದೆ ಎನ್ನಲಾಗುತ್ತಿದೆ. ಕಾರ್ಕಳ ಹೆಬ್ರಿಯಲ್ಲಿ ತಿಂಗಳಿಗೆ ಸುಮಾರು 23 ಸಾವಿರ ಬಾಕ್ಸ್ ಮದ್ಯ ಮಾರಾಟವಾಗುತ್ತಿದೆ ಎಂದು ಹೇಳಲಾಗುತ್ತಿದೆ.