ಅಧ್ಯಕ್ಷ – ರವಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ – ಅಶೋಕ್ ಶೆಟ್ಟಿ
ಕಾರ್ಕಳ : ಬಂಟರ ಸೇವಾ ಸಂಘ ಕುಕ್ಕುಂದೂರು ಇದರ ನೂತನ ಅಧ್ಯಕ್ಷರಾಗಿ ಗುತ್ತಿಗೆದಾರ ಕೆ. ರವಿ ಶೆಟ್ಟಿ ಕುಕ್ಕುಂದೂರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ತಾ.ಪಂ. ಮಾಜಿ ಸದಸ್ಯ ಅಶೋಕ್ ಶೆಟ್ಟಿ ಅಂಗಡಿಮನೆ ಅವರನ್ನು ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ಜೋಡುರಸ್ತೆಯಲ್ಲಿ ನಡೆದ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಕೋಶಾಧಿಕಾರಿಯಾಗಿ ರಘುನಾಥ ಶೆಟ್ಟಿ ಅಶ್ವತಪುರ, ಕ್ರೀಡಾ ಅಧ್ಯಕ್ಷರಾಗಿ ವಿದ್ಯಾ ಯು. ಶೆಟ್ಟಿ, ಸಾಂಸ್ಕೃತಿಕ ಅಧ್ಯಕ್ಷರಾಗಿ ಅನಿತಾ ಎ. ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಹರೀಶ್ ಶೆಟ್ಟಿ ಮತ್ತು ಸಾಗರ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.