Friday, August 19, 2022
spot_img
Homeಸ್ಥಳೀಯ ಸುದ್ದಿಸಾಣೂರು ಆದರ್ಶ್ ಇಂಡಸ್ಟ್ರೀಯಲ್‌ ವಿರುದ್ಧ ಮತ್ತೆ ಸ್ಥಳೀಯರ ಆಕ್ರೋಶ

ಸಾಣೂರು ಆದರ್ಶ್ ಇಂಡಸ್ಟ್ರೀಯಲ್‌ ವಿರುದ್ಧ ಮತ್ತೆ ಸ್ಥಳೀಯರ ಆಕ್ರೋಶ

ಕಾರ್ಕಳ : ಸಾಣೂರಿನ ಆದರ್ಶ್ ಇಂಡಸ್ಟ್ರೀಯಲ್‌ ಕೆಮಿಕಲ್ಸ್‌ ಹೊರಸೂಸುವ ವಿಷಯುಕ್ತ ಗಾಳಿಯಿಂದ ‍ಸ್ಥಳೀಯರಲ್ಲಿ ಆರೋಗ್ಯ ಸಮಸ್ಯೆಯುಂಟಾಗಿದೆ. ಹಲವರು ಮಂದಿ ಕ್ಯಾನ್ಸರ್‌, ಅಸ್ತಮಾ ಪೀಡಿತರಾಗಿದ್ದಾರೆ. ಜಾನುವಾರುಗಳು ಸಾವನ್ನಪ್ಪಿದೆ. ಬಾವಿಗಳಲ್ಲಿ ತೈಲಯುಕ್ತ ನೀರು ಕಂಡುಬಂದಿದೆ. ಪ್ರಕೃತಿಯನ್ನು ಹಾಳು ಮಾಡುವಂತಹ ಕಾರ್ಖಾನೆ ವಿರುದ್ಧ ಸ್ಥಳೀಯರು ದೂರು ನೀಡಿದ ಮೇರೆಗೆ ಆ. 5ರಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯವರು ಪರಿಶೀಲನೆಗಾಗಿ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಆದರ್ಶ ಕಂಪೆನಿ ಕಳೆದೆರಡು ದಿನಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಕಾರ್ಖಾನೆ ಕಾರ್ಯನಿರ್ವಹಿಸುತ್ತಿರುವ ವೇಳೆಯೇ ಪರಿಶೀಲನೆ ನಡೆಸಬೇಕೆ ಹೊರತು ಮುಚ್ಚಿರುವ ಸಂದರ್ಭ ಮಾಡಿದಲ್ಲಿ ಸಮರ್ಪಕ ವರದಿ ಸಿಗಲು ಸಾಧ್ಯವಿಲ್ಲ ಎಂದು ಕಾರ್ಕಳ ಪರಿಸರ ರಕ್ಷಣಾ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಫೆ. 14ರಂದು ನಡೆದಿತ್ತು ಪ್ರತಿಭಟನೆ
ಆದರ್ಶ್ ಕಾರ್ಖಾನೆಯನ್ನು ವಸತಿ ರಹಿತ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಆಗ್ರಹಿಸಿ ಫೆ. 14ರಂದು ಕಾರ್ಕಳ ಪರಿಸರ ರಕ್ಷಣಾ ಸಮಿತಿ ವತಿಯಿಂದ ಸಾಣೂರಿನಲ್ಲಿ ಪ್ರತಿಭಟನೆ ನಡೆದಿತ್ತು. ಅಂದು ನೂರಾರು ಮಂದಿ ಗ್ರಾಮಸ್ಥರು ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿ ಕಾರ್ಖಾನೆ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್‌ ಭೇಟಿ ನೀಡಿ ಪ್ರತಿಭಟನಾ ನಿರತರ ಮನವಿ ಸ್ವೀಕರಿಸಿದರು. ಉಡುಪಿ ಜಿಲ್ಲಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಕೇಂದ್ರದ ಜಂಟಿ ನಿರ್ದೇಶಕರು, ಸಾಣೂರು ಪಂಚಾಯತ್‌ ಅಭಿವೃದ್ದಿ ಅಧಿಕಾರಿ, ಕೇಂದ್ರ ಅರಣ್ಯ, ಪರಿಸರ ಮತ್ತು ಹವಮಾನ ಬದಲಾವಣೆ ಮಂತ್ರಾಲಯ ಬೆಂಗಳೂರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ವಲಯ ಹಿರಿಯ ಪರಿಸರ ಅಧಿಕಾರಿಯವರಿಗೆ ಆದರ್ಶ್‌ ಇಂಡಸ್ಟ್ರಿಯಲ್‌ನಿಂದ ಆಗುತ್ತಿರುವ ತೊಂದರೆ ಕುರಿತು ಮನವಿ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!