Wednesday, August 17, 2022
spot_img
Homeಸ್ಥಳೀಯ ಸುದ್ದಿಕಾರ್ಕಳ ವಕೀಲರ ಸಂಘದಿಂದ ಪ್ರತಿಭಟನೆ

ಕಾರ್ಕಳ ವಕೀಲರ ಸಂಘದಿಂದ ಪ್ರತಿಭಟನೆ

ಹೊಸ ನಿಯಮದಿಂದ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಂತಾಗುವುದು – ಸುನೀಲ್‌ ಶೆಟ್ಟಿ

ಕಾರ್ಕಳ : ಜನನ ಮರಣ ನೋಂದಣಿ ಕಾಯ್ದೆ ಯು ಕಲಂ 13 (3) ಗೆ ಕರ್ನಾಟಕ ಸರಕಾರ ತಿದ್ದುಪಡಿ ಮಾಡಿ ಮ್ಯಾಜಿಸ್ಟ್ರೇಟ್ ಕೋರ್ಟ್‌ ವ್ಯಾಪ್ತಿಯಿಂದ ಉಪವಿಭಾಗಾಧಿಕಾರಿ ಅವರಿಗೆ ನೀಡಲು ನಿರ್ಧರಿಸಿರುವುದನ್ನು ವಿರೋಧಿಸಿ ಆ. 4ರಂದು ಕಾರ್ಕಳ ನ್ಯಾಯಾಲಯದ ಆವರಣದಲ್ಲಿ ವಕೀಲರು ಪ್ರತಿಭಟನೆ ನಡೆಸಿದರು.


ವಕೀಲರ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಮಾತನಾಡಿ, ಸರಕಾರದ ಹೊಸ ನಿಯಮದಿಂದ ಭಷ್ಟಾಚಾರಕ್ಕೆ ಎಡೆಮಾಡಿಕೊಟ್ಟಂತೆ ಆಗುವುದು. ಉಪವಿಭಾಗಾಧಿಕಾರಿ ಕಚೇರಿಯಲ್ಲಿ ವಿಚಾರಣೆ ಕೂಡ ನ್ಯಾಯಬದ್ಧವಾಗಿ ನಡೆಯಲು ಸಾಧ್ಯವಿಲ್ಲ ಎಂದರು. ಹಿರಿಯ ವಕೀಲ ಕೆ. ಬಾಲಕೃಷ್ಣ ಶೆಟ್ಟಿ, ಹೆಚ್. ಶೇಖರ ಮಡಿವಾಳ್, ಸಂಘದ ಪ್ರಧಾನ ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್, ಉಪಾಧ್ಯಕ್ಷ ದಯಾನಂದ ನಾಯಕ್, ಸನತ್ ಕುಮಾರ್ ಜೈನ್, ರವೀಂದ್ರ ಮೊಯ್ಲಿ, ಬಾರ್ ಅಸೋಸಿಯೇಶನ್ ಸದಸ್ಯರೆಲ್ಲರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!