Homeಜಿಲ್ಲಾಕೆರೆಯಲ್ಲಿ ಮುಳುಗಿ ಕಾಡಾನೆ ಸಾವು

Related Posts

ಕೆರೆಯಲ್ಲಿ ಮುಳುಗಿ ಕಾಡಾನೆ ಸಾವು


ಮಡಿಕೇರಿ : ದಕ್ಷಿಣ ಕೊಡಗಿನ ಖಾಸಗಿ ಎಸ್ಟೇಟ್‌ನಲ್ಲಿರುವ ಕೆರೆಯಲ್ಲಿ ಕಾಡಾನೆಯೊಂದು ಮುಳುಗಿ ಸಾವನ್ನಪ್ಪಿದೆ. ಅರಣ್ಯ ವ್ಯಾಪ್ತಿಯ ಬಡಗಬನಂಗಲ ಗ್ರಾಮದ ಬಿಬಿಟಿಸಿ ಎಸ್ಟೇಟ್‌ನಲ್ಲಿ ಈ ಘಟನೆ ಸಂಭವಿಸಿದೆ. ಇದು ಒಂದು ವಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ವರದಿಯಾದ ಅಸಹಜ ಕಾಡಾನೆ ಸಾವಿನ ನಾಲ್ಕನೇ ಪ್ರಕರಣ.ಬುಧವಾರ ಎಸ್ಟೇಟ್ ಕಾರ್ಮಿಕರು ಎಸ್ಟೇಟ್ ಆವರಣದಲ್ಲಿರುವ ಕೊಳದೊಳಗೆ ಆನೆಯ ಶವ ತೇಲುತ್ತಿರುವುದನ್ನು ನೋಡಿ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಬಂದ ಅಧಿಕಾರಿಗಳು ಕ್ರೇನ್ ಬಳಸಿ ಆನೆಯ ಮೃತದೇಹವನ್ನು ಮೇಲೆತ್ತಿದ್ದಾರೆ. ಕಾಡು ಆನೆಗೆ ಸುಮಾರು 60 ವರ್ಷ ವಯಸ್ಸಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಮನುಷ್ಯ-ಆನೆ ಸಂಘರ್ಷವನ್ನು ನಿಯಂತ್ರಿಸಲು ಅದರ ಚಲನವಲನವನ್ನು ಪತ್ತೆಹಚ್ಚಲು ಹೆಣ್ಣು ಆನೆಗೆ ಇತ್ತೀಚೆಗೆ ರೇಡಿಯೊ ಕಾಲರ್ ಹಾಕಲಾಗಿತ್ತು. ಆದರೆ ಈ ಆನೆ ಮೇವು ಅರಸಿ ಖಾಸಗಿ ಎಸ್ಟೇಟ್‌ಗೆ ನುಗ್ಗಿದೆ. ಕೆರೆಗೆ ಜಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಕೆರೆಯ ತುಂಬೆಲ್ಲ ಮಳೆ ನೀರು ತುಂಬಿದ್ದರಿಂದ ಆನೆ ಹೊರ ಬರಲು ಸಾಧ್ಯವಾಗಲಿಲ್ಲ.ಕಳೆದ ವಾರವಷ್ಟೇ ದಕ್ಷಿಣ ಕೊಡಗಿನಲ್ಲಿ ವಿದ್ಯುತ್ ಸ್ಪರ್ಶಿಸಿ ಮೂರು ಕಾಡಾನೆಗಳು ಸಾವನ್ನಪ್ಪಿದ್ದವು.

LEAVE A REPLY

Please enter your comment!
Please enter your name here

Latest Posts

error: Content is protected !!