ತೈವಾನ್‌ ಹತ್ತಿರ ಚೀನ ಬೃಹತ್‌ ಸಮರಾಭ್ಯಾಸ

ಪಿಂಗ್ಟನ್: ಅಮೆರಿಕದ ಸಂಸತ್ತಿನ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ ಬೆಳವಣಿಗೆಯಿಂದ ಕುದಿಯುತ್ತಿರುವ ಚೀನ ತೈವಾನ್‌ ಸುತ್ತ ಬೃಹತ್‌ ಯುದ್ಧ ಕವಾಯತು ಪ್ರಾರಂಭಿಸಿದೆ.
ತೈವಾನ್ ಸುತ್ತುವರಿದಂತೆ ಚೀನಾದ ಅತಿದೊಡ್ಡ ಮಿಲಿಟರಿ ಕಸರತ್ತು ಗುರುವಾರ ಆರಂಭವಾಗಿದ್ದು, ಅಮೆರಿಕದ ಜನಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್‌ಗೆ ಭೇಟಿ ನೀಡಿದ ನಂತರ ಪ್ರಮುಖ ಅಂತಾರಾಷ್ಟ್ರೀಯ ಹಡಗು ಮಾರ್ಗಗಳಲ್ಲಿ ತನ್ನ ಬಲ ಪ್ರದರ್ಶನ ಮಾಡಲು ಚೀನಾ ಸಜ್ಜಾಗಿದೆ.
ನಿನ್ನೆ ನ್ಯಾನ್ಸಿ ಪೆಲೋಸಿಯವರು ತೈವಾನ್ ಪ್ರವಾಸ ಕೈಗೊಂಡಾಗಲೇ ಚೀನಾ ಕಡೆಯಿಂದ ಬೆದರಿಕೆಗಳು ಬಂದಿದ್ದವು. ಸ್ವಯಂ ಅಧಿಕಾರ ನಡೆಸುತ್ತಿರುವ ತೈವಾನ್‌ ದ್ವೀಪ ಪ್ರಾಂತ್ಯ ತನಗೆ ಸೇರಿದ್ದು ಎಂದು ಚೀನಾ ಪ್ರತಿಪಾದಿಸುತ್ತಿದೆ.ತೈವಾನ್‌ ಸ್ವಾತಂತ್ರ್ಯ ರಕ್ಷಣೆ ಮಾಡುತ್ತೇನೆ ಎಂದು ಅಮೆರಿಕ ಎದಿರೇಟು ನೀಡುತ್ತಿದೆ.
ಕಳೆದ 25 ವರ್ಷಗಳಲ್ಲಿ ಅಮೆರಿಕ ಅಧ್ಯಕ್ಷರ ನಂತರದ ಪ್ರಬಲ ಪ್ರಮುಖ ಹುದ್ದೆ ಹೊಂದಿರುವ ಸ್ಪೀಕರ್ ಅವರು ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ. ತೈವಾನ್‌ನಂತಹ ಪ್ರಜಾಸತ್ತಾತ್ಮಕ ಮಿತ್ರನನ್ನು ಅಮೆರಿಕ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದು ಚೀನಾವನ್ನು ಕೆರಳಿಸಿದ್ದು ಅದಕ್ಕೆ ತಕ್ಕ ಶಾಸ್ತಿಯ ಭಾಗವಾಗಿ ಇಂದು ಬೃಹತ್ ಪ್ರಮಾಣದ ಮಿಲಿಟರಿ ಕಾರ್ಯಾಚರಣೆಯನ್ನು ತೈವಾನ್ ಸುತ್ತಮುತ್ತ ಕೈಗೊಂಡಿದೆ. ಇದು ವಿಶ್ವದ ಅತಿ ಜನನಿಬಿಡ ಜಲಮಾರ್ಗವಾಗಿದೆ.
ಅಂತಾರಾಷ್ಟ್ರೀಯ ಕಾಲಮಾನ ಇಂದು 12 ಗಂಟೆಗೆ ಮಿಲಿಟರಿ ಕಾರ್ಯಾಚರಣೆ ಆರಂಭವಾಗಲಿದ್ದು, ಲೈವ್-ಫೈರಿಂಗನ್ನು ಒಳಗೊಂಡಿರುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ನೈಜ ಯುದ್ಧ ಕಸರತ್ತಿಗಾಗಿ ಚೀನಾ ತೈವಾನ್ ದ್ವೀಪದ ಸುತ್ತಲಿನ ಆರು ಪ್ರಮುಖ ಪ್ರದೇಶಗಳನ್ನು ಆಯ್ಕೆ ಮಾಡಿದೆ. ಈ ಅವಧಿಯಲ್ಲಿ, ಸಂಬಂಧಿತ ಹಡಗುಗಳು ಮತ್ತು ವಿಮಾನಗಳು ಜಲ ಮತ್ತು ವಾಯುಪ್ರದೇಶಗಳನ್ನು ಪ್ರವೇಶಿಸಬಾರದು ಎಂದು ಚೀನ ಹೇಳಿದೆ.
ಈ ಕಾರ್ಯಾಚರಣೆ ತೈವಾನ್‌ನ ಸುತ್ತಮುತ್ತಲಿನ ಬಹು ವಲಯಗಳಲ್ಲಿ ನಡೆಯುತ್ತದೆ. ದ್ವೀಪದ ತೀರದಿಂದ ಕೇವಲ 20 ಕಿಲೋಮೀಟರ್ ಒಳಗೆ ಕೆಲವು ಹಂತಗಳಲ್ಲಿ ನಡೆಯಲಿದ್ದು ಭಾನುವಾರ ಮಧ್ಯಾಹ್ನ ಮುಕ್ತಾಯಗೊಳ್ಳಲಿದೆ. ತೈವಾನ್‌ನ ರಕ್ಷಣಾ ಸಚಿವಾಲಯ ಈ ಕುರಿತು ಪ್ರತಿಕ್ರಿಯಿಸಿದ್ದು, ತಾನು ಸಮರಾಭ್ಯಾಸವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಸಂಘರ್ಷಕ್ಕೆ ಸಿದ್ದವಾಗಿದ್ದೇವೆ. ಆದರೆ ಸಂಘರ್ಷವೇ ಪರಿಹಾರವಲ್ಲ ಎಂದು ಹೇಳಿದೆ.





























































































































































































































error: Content is protected !!
Scroll to Top