Friday, August 19, 2022
spot_img
Homeಸ್ಥಳೀಯ ಸುದ್ದಿಆಳ್ವಾಸ್‍ನ ಅಮರಕ್ರಾಂತಿ ನಾಟಕ ಪ್ರಥಮ : ರಾಜ್ಯ ಮಟ್ಟಕ್ಕೆ ಆಯ್ಕೆ

ಆಳ್ವಾಸ್‍ನ ಅಮರಕ್ರಾಂತಿ ನಾಟಕ ಪ್ರಥಮ : ರಾಜ್ಯ ಮಟ್ಟಕ್ಕೆ ಆಯ್ಕೆ

ಮೂಡುಬಿದಿರೆ : ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ನಾಟಕ ಸ್ಪರ್ಧೆಯಲ್ಲಿ ಅಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ-1837 ನಾಟಕ ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಈ ಹಿಂದೆಯೂ ಪ್ರದರ್ಶಿಸಿದ ನಾಟಕವು ಮಂಗಳೂರಿನ ರಾಮಕೃಷ್ಣ ಕಾಲೇಜಿನಲ್ಲಿ ನಡೆದ ವಿಶ್ವವಿದ್ಯಾಲಯ ಫಟಕ ಮಟ್ಟದ ಸ್ಪರ್ಧೆಯಲ್ಲೂ ಪ್ರಥಮ ಪ್ರಶಸ್ತಿ ಪಡೆದುಕೊಂಡಿತ್ತು. ಡಾ| ಪ್ರಭಾಕರ ಶಿಶಿಲ ರಚಿಸಿದ ನಾಟಕವನ್ನು ಜೀವನ್ ರಾಂ ಸುಳ್ಯ ನಿರ್ದೇಶಿಸಿದ್ದಾರೆ. ಭುವನ ಮಣಿಪಾಲ ಮತ್ತು ಉಜ್ವಲ್ ಯು.ವಿ. ತಾಂತ್ರಿಕ, ಸಂಗೀತದಲ್ಲಿ ಮನುಜ ನೇಹಿಗ ಸುಳ್ಯ, ಬೆಳಕು ನಿರ್ವಹಣೆ ಶಿಶಿರ ಕಲ್ಕೂರ, ಪ್ರಸಾದನದಲ್ಲಿ ಸೋಮನಾಥ ಉಡುಪಿ ಸಹಕಾರ ನೀಡಿದ್ದಾರೆ. ಕಲಾವಿದರಾಗಿ ಕಾರ್ತಿಕ್ ಕುಮಾರ್, ಶ್ರೀಕಂಠ ರಾವ್, ಜೋಶಿತ್ ಶೆಟ್ಟಿ, ಗಗನ್ ಶೆಟ್ಟಿ , ರೇವನ್ ಪಿಂಟೊ, ರೋನಿತ್ ರಾಯ್ ,ಮನೀಶ್, ಪ್ರಮೋದ್ ಶೆಟ್ಟಿ, ವನ್ಯಶ್ರೀ ಸುಳ್ಯ, ಹರ್ಷಿತಾ ಶಿರೂರು ಅಭಿನಯಿಸಿದ್ದಾರೆ. ನಾಟಕ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.


ಆ. 7-8 ರಾಜ್ಯಮಟ್ಟದ ಸ್ಪರ್ಧೆ
ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ ವಿಷಯವನ್ನು ಆಧರಿಸಿ ಕರ್ನಾಟಕ ಅಂತರ್ ವಿಶ್ವವಿದ್ಯಾನಿಲಯಗಳ ರಾಜ್ಯ ಮಟ್ಟದ ನಾಟಕ ಸ್ಪರ್ಧೆ ಆ.7 ಮತ್ತು 8 ರಂದು ಮಂಗಳೂರು ವಿವಿ ಆಶ್ರಯದಲ್ಲಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆವರಣದಲ್ಲಿ ನಡೆಯಲಿದೆ. ರಾಜ್ಯದ 60ಕ್ಕಿಂತಲೂ ಹೆಚ್ಚು ನಾಟಕ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!