ಬರ್ಮಿಂಗ್ಹ್ಯಾಮ್:ಕಾಮನ್ವೆಲ್ತ್ ಗೇಮ್ಸ್ನಲ್ಲಿ ವೇಟ್ ಲಿಫ್ಟರ್ಗಳ ಪದಕ ಬೇಟೆ ಮುಂದುವರಿದಿದೆ. ಅಚಿಂತಾ ಶೆಯುಲಿ ಅವರು 73 ಕೆಜಿ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದು, ಇದರೊಂದಿಗೆ 3 ಚಿನ್ನದೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 6ಕ್ಕೇರಿದೆ. 20ರ ಹರೆಯದ ಅಚಿಂತಾ ಒಟ್ಟು 313 ಕೆಜಿ ಭಾರ ಎತ್ತಿದ್ದಾರೆ.