ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಬಸ್ ಚಾಲಕರ ಕೊರತೆಯನ್ನು ನಿವಾರಿಸುವ ಸಲುವಾಗಿ ಹೊಸ ಯೋಜನೆ ಹಾಕಿಕೊಂಡಿದೆ.ಇದಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೇಮಕಾತಿ (ಕೆಎಸ್ಆರ್ಟಿಸಿ) ನೀತಿಯಲ್ಲಿ ಪ್ರಮುಖ ಬದಲಾವಣೆ ಮಾಡಿಕೊಳ್ಳಲಾಗಿದ್ದು, ಹೊರಗುತ್ತಿಗೆ ಆಧಾರದಲ್ಲಿ ಚಾಲಕರನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ.
ಖಾಸಗಿ ಕಂಪನಿಗಳ ಮೂಲಕ 350 ಚಾಲಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತದೆ.
ಒಂದೆಡೆ ಸಿಬ್ಬಂದಿ ಕೊರತೆ ಇನ್ನೊಂದೆಡೆ ಕೆಲವು ಡಿಪೊಗಳಿಂದ ವರ್ಗಾವಣೆ ಬೇಡಿಕೆ ಇರುವುದರಿಂದ ಸಂಸ್ಥೆಗೆ ಚಾಲಕ ಮತ್ತು ನಿರ್ವಾಹಕರ ಕೊರತೆಯಾಗುತ್ತಿದೆ. ಮಂಗಳೂರು, ಪುತ್ತೂರು ಹೊಸ ನೀತಿಯಲ್ಲಿ ಬಿಡ್ದಾರರು ಮಂಗಳೂರಿಗೆ 150, ಪುತ್ತೂರಿಗೆ 100, ರಾಮನಗರಕ್ಕೆ 50 ಮತ್ತು ಚಾಮರಾಜನಗರ ವಿಭಾಗಕ್ಕೆ 50 ಚಾಲಕರನ್ನು ಒದಗಿಸಬೇಕು.
ಸದ್ಯದ ಆರ್ಥಿಕ ಸ್ಥಿತಿಯಲ್ಲಿ ಹೊಸದಾಗಿ ಚಾಲಕರನ್ನು ನೇಮಿಸಿಕೊಳ್ಳಲು ಸರ್ಕಾರದಿಂದ ಅನುಮತಿ ಪಡೆಯುವುದಕ್ಕೆ ಸಾಧ್ಯವಿಲ್ಲ. ಸದ್ಯ ಉದ್ಯೋಗದಲ್ಲಿ ಇರುವ ಅನೇಕ ಸಾರಿಗೆ ನೌಕರರು ಮಂಗಳೂರು ಮತ್ತು ಪುತ್ತೂರಿನಂತಹ ಸ್ಥಳಗಳಲ್ಲಿ ಕೆಲಸ ಮಾಡಲು ಬಯಸುವುದಿಲ್ಲ. ಮತ್ತೊಂದೆಡೆ, ಸಾರಿಗೆ ಸೇವೆಗಳನ್ನು ಒದಗಿಸಲು ಕನಿಷ್ಠ 1,000 ಹೆಚ್ಚುವರಿ ಚಾಲಕರು ಬೇಕು. ಪ್ರಯಾಣದ ಬೇಡಿಕೆಗೆ ಅನುಗುಣವಾಗಿ ಟೆಂಡರ್ ಮೂಲಕ ಚಾಲಕರನ್ನು ಗುತ್ತಿಗೆಯ ಮೇಲೆ ಪಡೆಯುವ ಕಾರ್ಯಸಾಧ್ಯತೆಯನ್ನು ಪರೀಕ್ಷಿಸುತ್ತೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಚಾಲಕರಿಗೆ ತಿಂಗಳಿಗೆ 23,000 ರೂ. ನೀಡಲಾಗುವುದು. ಇದರ ಜೊತೆಗೆ ಚಾಲಕನ ಸೇವೆಯನ್ನು 25 ದಿನಗಳವರೆಗೆ ಬಳಸಿಕೊಳ್ಳದಿದ್ದರೆ, ಪ್ರತಿ ಗಂಟೆಗೆ ಸ್ಟಿಯರಿಂಗ್ ಮತ್ತು ಇತರ ಪ್ರೋತ್ಸಾಹಕ ರೂಪದಲ್ಲಿ 100 ರೂಪಾಯಿ ಭತ್ಯೆ ಸಿಗುತ್ತದೆ. ಆದರೆ ಖಾಯಂ ನೌಕರರಿಗೆ ಸಿಗುವ ಯಾವುದೇ ಭತ್ಯೆ ಈ ಚಾಲಕರಿಗೆ ಸಿಗುವುದಿಲ್ಲ.
ಕೆಎಸ್ಆರ್ಟಿಸಿಗೆ ಹೊರಗುತ್ತಿಗೆ ಮೂಲಕ ಚಾಲಕರ ನೇಮಕ
Recent Comments
ಕಗ್ಗದ ಸಂದೇಶ
on