Friday, August 19, 2022
spot_img
Homeಸ್ಥಳೀಯ ಸುದ್ದಿಕಾರ್ಕಳ : ಹಾಲಿನ ಖರೀದಿ ದರ ಹೆಚ್ಚಳಕ್ಕೆ ಭಾ.ಕಿ.ಸಂ. ಒತ್ತಾಯ

ಕಾರ್ಕಳ : ಹಾಲಿನ ಖರೀದಿ ದರ ಹೆಚ್ಚಳಕ್ಕೆ ಭಾ.ಕಿ.ಸಂ. ಒತ್ತಾಯ

ಕಾರ್ಕಳ : ಹಾಲಿನ ಖರೀದಿ ದರವು ಪರಿಷ್ಕರಣೆಗೊಂಡು ಸುಮಾರು 3 ವರ್ಷಗಳಾಗಿದೆ. ಈ ಸಮಯದಲ್ಲಿ ಕೂಲಿಯಾಳುಗಳ ಸಂಬಳ, ಪಶು ಆಹಾರ, ಡೈರಿಗೆ ಹಾಲು ಹಾಕುವ ಸಾಗಾಣಿಕಾ ವೆಚ್ಚ, ವೈದ್ಯಕೀಯ ಖರ್ಚು, ಬೈ ಹುಲ್ಲಿನ ದರ ಎಲ್ಲವೂ ಅಧಿಕವಾಗಿದೆ. ಹೀಗಾಗಿ ಹಾಲಿನ ಖರೀದಿ ದರವನ್ನು 5 ರೂ. ಹೆಚ್ಚಿಸುವಂತೆ ಕೆ.ಎಮ್.ಎಫ್. ಅನ್ನು ಮನವಿ ಮಾಡುವ ಕುರಿತು ಭಾರತೀಯ ಕಿಸಾನ್‌ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಭಾ.ಕಿ.ಸಂ.ದ ತಾಲೂಕು ಸಮಿತಿ ಅಧ್ಯಕ್ಷ ಗೋವಿಂದ ರಾಜ್ ಭಟ್ ಕಡ್ತಲ ಅವರ ಅಧ್ಯಕ್ಷತೆಯಲ್ಲಿ ಸಂಘದ ಕಾರ್ಯಾಲಯದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು.

ಬೆಳೆ ನಷ್ಟ ಅರ್ಜಿ ಸಲ್ಲಿಸಿ
ಸಂಘದ ಜಿಲ್ಲಾಧ್ಯಕ್ಷ ನವೀನ್‍ಚಂದ್ರ ಜೈನ್ ಮಾತನಾಡಿ‌, ಈ ವರ್ಷ ಸುರಿದ ಅತಿಯಾದ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆನಷ್ಟವಾಗಿದೆ. ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಮೀಕ್ಷೆ ನಡೆಯುತ್ತಿದ್ದು, ರೈತರು ಬೆಳೆ ನಷ್ಟದ ಬಗ್ಗೆ ಅರ್ಜಿಯನ್ನು ಗ್ರಾಮ ಕರಣೀಕರು, ತೋಟಗಾರಿಕಾ ಮತ್ತು ಕೃಷಿ ಇಲಾಖೆ ಅಥವಾ ಭಾ.ಕಿ.ಸಂ. ಕಚೇರಿಯಲ್ಲಿ ಸಲ್ಲಿಸಬಹುದೆಂದು ತಿಳಿಸಿದರು.

ಸಚಿವರ ಗಮನಕ್ಕೆ ತರಲಾಗಿದೆ
ಗೋವಿಂದರಾಜ್ ಭಟ್ ಮಾತನಾಡಿ, ರೈತರ ಸಮಸ್ಯೆ ಬಗ್ಗೆ ಈಗಾಗಲೇ ಸಚಿವ ಸುನೀಲ್ ಕುಮಾರ್‌ ಗಮನಕ್ಕೆ ತರಲಾಗಿದೆ. ಪೂರಕವಾಗಿ ಸ್ಪಂದಿಸಿದ ಸಚಿವರು ರೈತರ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಟ್ಟು ಸೇರಿಸಿ ಸಭೆ ನಡೆಸಲಾಗುವುದು ಎಂದು ತಿಳಿಸಿರುತ್ತಾರೆ ಎಂದು ಸಭೆಗೆ ತಿಳಿಸಿದರು. ಅಲ್ಲದೆ ಕಸ್ತೂರಿ ರಂಗನ್ ವರದಿಯ ಅನುಷ್ಠಾನದಿಂದ ರೈತರಿಗಾಗುವ ತೊಂದರೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಬಗ್ಗೆ ಭರವಸೆ ನೀಡಿರುತ್ತಾರೆ ಎಂದರು.
ಸಂಘದ ಉಪಾಧ್ಯಕ್ಷರಾದ ಸುಂದರ ಶೆಟ್ಟಿ ಮುನಿಯಾಲು, ಕೆ.ಪಿ. ಭಂಡಾರಿ ಕೆದಿಂಜೆ, ಶೇಖರ್ ಶೆಟ್ಟಿ ನೀರೆ, ಹಾಗೂ ತಾಲೂಕು ಸಮಿತಿ ಮತ್ತು ಗ್ರಾಮ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಇನ್ನಾ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!