Wednesday, August 17, 2022
spot_img
Homeಸುದ್ದಿದುಷ್ಕರ್ಮಿಯಿಂದ ರಸ್ತೆ ಬದಿಯಲ್ಲಿರುವವರಿಗೆಲ್ಲ ಚಾಕು ಇರಿತ

ದುಷ್ಕರ್ಮಿಯಿಂದ ರಸ್ತೆ ಬದಿಯಲ್ಲಿರುವವರಿಗೆಲ್ಲ ಚಾಕು ಇರಿತ

ದುಷ್ಕರ್ಮಿಯಿಂದ ರಸ್ತೆ ಬದಿಯಲ್ಲಿರುವವರಿಗೆಲ್ಲ ಚಾಕುವಿನಿಂದ ಹಲ್ಲೆ
ಚಿಕ್ಕಬಳ್ಳಾಪುರ: ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಸಿಕ್ಕಸಿಕ್ಕವರ ಮೇಲೆಲ್ಲ ಚಾಕುವಿನಿಂದ ಹಲ್ಲೆ ನಡೆಸಿ ಪಲಾಯನ ಮಾಡಿರುವ ಆಘಾತಕಾರಿ ಘಟನೆ ಭಾನುವಾರ ರಾತ್ರಿ ಚಿಕ್ಕಬಳ್ಳಾಪುರ ನಗರದಲ್ಲಿ ಸಂಭವಿಸಿದೆ.
ರಾತ್ರಿ ಸುಮಾರು 10 ಗಂಟೆ ಹೊತ್ತಿಗೆ ಹೆಲ್ಮೆಟ್‌ ಧರಿಸಿ ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ನಗರಸಭೆ ಎದುರು, ಕಾರ್ಖಾನೆ ಪೇಟೆ, ಬಿಬಿ ರಸ್ತೆ ಮತ್ತಿತರೆಡೆ ರಸ್ತೆ ಬದಿ ಸಿಕ್ಕಿದವರ ಮೇಲೆಲ್ಲ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಈ ಪೈಕಿ ಒಬ್ಬ ವ್ಯಕ್ತಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್‌ನಲ್ಲಿ ಬಂದ ವ್ಯಕ್ತಿ ಒಂದು ಕೈಯಲ್ಲಿ ಚಾಕು ಹಿಡಿದು ರಸ್ತೆ ಬದಿಯಲ್ಲಿ ಸಿಕ್ಕಿದವರಿಗೆಲ್ಲ ಇರಿಯುತ್ತಾ ಹೋಗಿದ್ದಾನೆ. ಕನಿಷ್ಠ 20 ಮಂದಿ ಅವನ ಹುಚ್ಚಾಟಕ್ಕೆ ಸಿಕ್ಕಿ ಗಾಯಗೊಂಡಿದ್ದಾರೆ. ಇರಿದ ದುಷ್ಕರ್ಮಿ ಯಾರು ಎಂದು ಇನ್ನೂ ತಿಳಿದುಬಂದಿಲ್ಲ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!