Friday, August 19, 2022
spot_img
Homeಸುದ್ದಿಆ. 7 - 14 : ಮಹಾಕವಿ ರತ್ನಾಕರವರ್ಣಿ ವಿರಚಿತ ಮಹಾಕಾವ್ಯ ಭರತೇಶ ವೈಭವ ವಾಚನ...

ಆ. 7 – 14 : ಮಹಾಕವಿ ರತ್ನಾಕರವರ್ಣಿ ವಿರಚಿತ ಮಹಾಕಾವ್ಯ ಭರತೇಶ ವೈಭವ ವಾಚನ – ವ್ಯಾಖ್ಯಾನ ಸಪ್ತಾಹ

ಕಾರ್ಕಳ : ಮಂಗಳೂರು ವಿಶ್ವವಿದ್ಯಾನಿಲಯ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ ಆಶ್ರಯದಲ್ಲಿ ಶ್ರೀ ಜೈನಧರ್ಮ ಜೀರ್ಣೋದ್ಧಾರಕ ಸಂಘ ಕಾರ್ಕಳ ಮತ್ತು ಭಾರತೀಯ ಜೈನ್‌ ಮಿಲನ್ ಸಹಯೋಗದೊಂದಿಗೆ ಕಾರ್ಕಳ ಭೈರವರಸರ ಆಸ್ಥಾನ ಕವಿ, ಸಾಂಗತ್ಯ ಚಕ್ರವರ್ತಿ ಮಹಾಕವಿ ರತ್ನಾಕರವರ್ಣಿ ವಿರಚಿತ ಮಹಾಕಾವ್ಯ ಭರತೇಶ ವೈಭವ ವಾಚನ – ವ್ಯಾಖ್ಯಾನ ಸಪ್ತಾಹವು ಬಾಹುವಲಿ ಪ್ರವಚನ ಮಂದಿರದಲ್ಲಿ ಆ. 7 ರಿಂದ 14 ರವರೆಗೆ ಪ್ರತಿದಿನ ಸಂಜೆ ಗಂಟೆ 7 ರಿಂದ 9 ರವರೆಗೆ ಜರುಗಲಿದೆ.

ಉದ್ಘಾಟನೆ
ಆ. 7ರಂದು ಸಂಜೆ 4:30 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಕಾರ್ಯಕ್ರಮ ಉದ್ಘಾಟಿಸುವರು. ಕಾರ್ಕಳ ಶ್ರೀ ಜೈನಧರ್ಮ ಜೀರ್ಣೋದ್ಧಾರಕ ಸಂಘದ ಕಾರ್ಯಾಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್‌ ಅಧ್ಯಕ್ಷತೆ ವಹಿಸಲಿದ್ದು, ಸಂಘದ ಪ್ರಧಾನ ಕಾರ್ಯದರ್ಶಿ ಎಂ. ಕೆ. ವಿಜಯ ಕುಮಾ‌ರ್‌, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಎ. ಮೋಹನ್ ಪಡಿವಾಳ್, ಭಾರತೀಯ ಜೈನ್ ಮಿಲನ್ ವಲಯದ ನಿರ್ದೇಶಕ ಅಂಡಾರು ಕೆ. ಮಹಾವೀರ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.

ಆ. 7ರ ಭಾನುವಾರ ಮತ್ತು 14ರ ಆದಿತ್ಯವಾರದಂದು ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರಿಂದ ಹಾಡುಗಾರಿಕೆಯು ಮೂಡಿಬರಲಿದೆ. ಆ. 8 ಸೋಮವಾರದಿಂದ 13 ಶನಿವಾರದವರೆಗೆ ಖ್ಯಾತ ಯಕ್ಷಗಾನ ಭಾಗವತೆ ಕಾವ್ಯಶ್ರೀ ಆಜೇರು ಇವರಿಂದ ಹಾಡುಗಾರಿಕೆ. ಹಿಮ್ಮೇಳದಲ್ಲಿ ಚಂದ್ರಶೇಖರ ಆಚಾರ್ಯ, ಗುರುವಾಯನಕೆರೆ ಮದ್ದಳೆ ವಾದಕರಾಗಿ ಸಹಕಾರ ನೀಡಲಿರುವರು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಮುನಿರಾಜ ರೆಂಜಾಳ ವ್ಯಾಖ್ಯಾನ ನಡೆಸಿಕೊಡಲಿದ್ದಾರೆ.

ಸಮಾರೋಪ ಸಮಾರಂಭ
ಆ. 14ರಂದು ಭಾನುವಾರ ಸಂಜೆ ಗಂಟೆ 4-30ಕ್ಕೆ ಸಮಾರೋಪ ಸಮಾರಂಭವು ಜರುಗಲಿದ್ದು, ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ ಕುಮಾರ್‌ ಅಧ್ಯಕ್ಷತೆ ವಹಿಸಲಿರುವರು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಸಿ. ಕೆ. ಕಿಶೋರ್‌ ಕುಮಾರ್‌, ಮ.ವಿ.ವಿ. ಪರೀಕ್ಷಾಂಗದ ಕುಲಸಚಿವ ಪಿ. ಎಲ್.‌ ಧರ್ಮ, ನ್ಯಾಯವಾದಿ ಎಂ. ಕೆ. ಸುವೃತ್‌ ಕುಮಾರ್‌, ಮ.ವಿ.ವಿ. ಹಣಕಾಸು ಅಧಿಕಾರಿ ಕೆ. ಎಸ್.‌ ಜಯಪ್ಪ, ಕಾರ್ಕಳ ಜೈನ್‌ ಮಿಲನ್‌ ಅಧ್ಯಕ್ಷೆ ಮಾಲತಿ ವಸಂತ್ ರಾಜ್‌ ಮತ್ತು ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠದ ಸದಸ್ಯ ಯೋಗರಾಜ್‌ ಜೈನ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಹಾಗೂ ಜೈನಧರ್ಮ ಜೀರ್ಣೋದ್ಧಾರಕ ಸಂಘದ ಜೊತೆ ಕಾರ್ಯದರ್ಶಿ ಮೋಹನ್ ಪಡಿವಾಳ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!